ಜಂಟಿ ಅಧಿವೇಶನದಲ್ಲಿ ವಿಶ್ವಾಸಮತ ಕೋರಲು ಬಿಜೆಪಿ ನಿರ್ಣಯ

ಇದೇ ಸಮಯದಲ್ಲಿ ವಿಧಾನಸಭೆ ಸಭಾಪತಿ ಕೆಜಿ ಬೋಪಯ್ಯ ಅವರನ್ನು ಉಳಿಸಿಕೊಳ್ಳಲು ಶಾಸಕಾಂಗ ಸಭೆ ತೀರ್ಮಾನಕ್ಕೆ ಬಂದಿದೆ. ಆದರೆ, ಶಾಸಕರ ಅನರ್ಹತೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನಿಂದ ತರಾಟೆಗೆ ಒಳಗಾಗಿದ್ದ ಬೋಪಯ್ಯ ಅವರ ತಲೆದಂಡ ಆದರೆ ಮಾತ್ರ ಅಧಿವೇಶನದಲ್ಲಿ ಭಾಗಿಯಾಗುವುದಾಗಿ ಜಾತ್ಯತೀತ ಜನತಾದಳ ಪಟ್ಟುಹಿಡಿದಿದೆ.
ಬಿಜೆಪಿ ತನ್ನ ಪಟ್ಟು ಕೂಡ ಸಡಿಸದಿರುವುದರಿಂದ ವಿಧಾನಮಂಡಲ ಅಧಿವೇಶನವನ್ನು ಬಹಿಷ್ಕರಿಸುವುದಾಗಿ ಜೆಡಿಎಸ್ ಹೇಳಿದೆ. ಇಷ್ಟು ಮಾತ್ರವಲ್ಲ, ಅಧಿವೇಶನವನ್ನು ವಿರೋಧಿಸಿ ವಿಧಾನಸೌಧದ ಎದುರಿನಲ್ಲೇ 'ಅಣಕು ವಿಧಾನಸಭೆ ಅಧಿವೇಶನ' ನಡೆಸಲು ನಿರ್ಧರಿಸಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸುಪ್ರೀಂ ಕೋರ್ಟಿನಿಂದ ಟೀಕೆಗೊಳಗಾಗಿರುವ ಕೆಜಿ ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಸುವ ಅಧಿವೇಶದಲ್ಲಿ ಭಾಗವಹಿಸುವುದು ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದಂತೆ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಜೆಡಿಎಸ್ ನ ಈ ನಡೆಗೆ ಯಾವುದೇ ಪ್ರತಿಕ್ರಿಯೆ ನೀಡದಿರಲು ಕಾಂಗ್ರೆಸ್ ನಿರ್ಧರಿಸಿದೆ. ಅಧಿವೇಶನದಲ್ಲಿ ಭಾಗವಹಿಸುವ ಬಗ್ಗೆಯೂ ಯಾವುದೇ ತೀರ್ಮಾನ ಕಾಂಗ್ರೆಸ್ ತೆಗೆದುಕೊಂಡಿಲ್ಲ.
2010ರ ಅಕ್ಟೋಬರ್ ನಲ್ಲಿ ನಡೆಸಲಾಗಿದ್ದ ಜಂಟಿ ಅಧಿವೇಶನ ರಣರಂಗವಾಗಿ ಮಾರ್ಪಟ್ಟಿತ್ತು. ಭಿನ್ನಮತದ ಹೊಗೆಯೆಬ್ಬಿಸಿದ್ದ ಶಾಸಕರನ್ನು ಯಡಿಯೂರಪ್ಪ ಅಣತಿಯ ಮೇರೆಗೆ ಅನರ್ಹಗೊಳಿಸಲಾಗಿತ್ತು. ವಿಶ್ವಾಸಮತ ಕೋರುವಾಗ ಸಭೆಗೆ ಬರಲು ಅವಕಾಶವನ್ನೇ ನೀಡಲಿಲ್ಲ ಎಂದು ಕಾಂಗ್ರೆಸ್ ಗಲಾಟೆಯೆಬ್ಬಿಸಿತ್ತು. ಗೂಳಿಹಟ್ಟಿ ಶೇಖರ್ ಅಂಗಿ ಹರಿದುಕೊಂಡು ಸಭೆಗೆ ಅಪಮಾನವೆಸಗಿದ್ದರು.
ಮಂಡನೆಯಾಗುತ್ತಿರುವ ವಿಧೇಯಕಗಳು
* ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ - 2007
* ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ)(ತಿದ್ದುಪಡಿ) ವಿಧೇಯಕ - 2001
* ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ - 2011
* ಕರ್ನಾಟಕ ರಾಜ್ಯ ನವೀನಾತ್ಮಕ ವಿಶ್ವವಿದ್ಯಾಲಯ ವಿಧೇಯಕ - 2011
* ಕರ್ನಾಟಕ ಕಲ್ಲು ಪುಡಿ ಮಾಡುವ ಘಟಕಗಳ (ಕ್ರಷರ್‌ಗಳ) ವಿನಿಮಯದ ಹಾಗೂ ನಿಯಂತ್ರಣ ವಿಧೇಯಕ - 2011
* ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ - 2011
* ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ - 2011
* (ಕರ್ನಾಟಕ ಪ್ರಾದೇಶಿಕ ಕಾನೂನುಗಳ) ನಿರಸನಗೊಳಿಸುವ ವಿಧೇಯಕ - 2011
* ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗ (ತಿದ್ದುಪಡಿ) ವಿಧೇಯಕ - 2011












Click it and Unblock the Notifications