ಛೇ! ವಿಂಡೀಸ್ ತಂಡದಲ್ಲಿ ಗೇಲ್ ಗೆ ಸ್ಥಾನವಿಲ್ಲ!

Chris Gayle
ಸೇಂಟ್ ಜಾನ್ಸ್(ಆಂಟಿಗುವಾ), ಮೇ 31: ಐಪಿಎಲ್‌ 4 ರಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಸರಣಿ ಶ್ರೇಷ್ಠ ಎನಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಗೇಲ್ ಸಂಭ್ರಮಿಸಿದ್ದರು. ಆದರೆ ಗೇಲ್ ತವರೂರಲ್ಲಿ ಗೇಲ್ ಸಾಧನೆಗೆ ತಕ್ಕ ಮನ್ನಣೆ ಸಿಕ್ಕಿಲ್ಲ. ಭಾರತ ವಿರುದ್ಧ ನಡೆಯುವ ಟ್ವೆಂಟಿ-20 ಹಾಗೂ ಮೊದಲ ಎರಡು ಏಕದಿನ ಪಂದ್ಯಗಳಿಗೆ ವಿಂಡೀಸ್ ತಂಡವನ್ನು ಪ್ರಕಟಿಸಲಾಗಿದ್ದು, ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರನ್ನು ಆಯ್ಕೆದಾರರು ಕಡೆಗಣಿಸಿದ್ದಾರೆ. ಮನೆಗೆ ಮಾರಿ, ಪರರಿಗೆ ಉಪಕಾರಿ ಎಂಬಂತಾಗಿದೆ ಗೇಲ್ ಪಾಡು.

ಪಾಕಿಸ್ತಾನ ವಿರುದ್ಧದ ಸರಣಿಗೆ ತನ್ನನ್ನು ಆಯ್ಕೆ ಮಾಡದ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮತ್ತು ಆಯ್ಕೆ ಸಮಿತಿ ಮೇಲೆ ಗೇಲ್ ಕಿಡಿಕಾರಿದ್ದರು.ನಂತರ ಅದೇ ಸಿಟ್ಟಲ್ಲಿ ಗೇಲ್ ಭಾರತಕ್ಕೆ ಬಂದು ಐಪಿಎಲ್ ನಾಲ್ಕನೆ ಆವೃತ್ತಿಯಲ್ಲಿ ಎದುರಾಳಿ ಬೌಲರ್ ಗಳನ್ನು ಹಿಗ್ಗಾ ಮುಗ್ಗಾ ಥಳಿಸಿದ್ದರು. ಟ್ವೆಂಟಿ 20 ಕ್ರಿಕೆಟ್ ಸರಣಿಯಲ್ಲಿ 6 ಬಾರಿ ಪಂದ್ಯ ಶ್ರೇಷ್ಠ ಎನಿಸಿ ದಾಖಲೆ ಮೆರೆದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 12 ಪಂದ್ಯಗಳಲ್ಲಿ 608 ರನ್ ದಾಖಲಿಸಿ ತಂಡಕ್ಕೆ ಹೊಸ ಹುರುಪು ನೀಡಿ ಫೈನಲ್ ವರೆಗೂ ತಲುಪುವಂತೆ ಮಾಡಿದರು.

ಆದರೆ, ಇದನ್ನು ಪರಿಗಣಿಸದ ವೆಸ್ಟ್ ಇಂಡೀಸ್ ಆಯ್ಕೆ ಸಮಿತಿ, ಗೇಲ್ ವರ್ತನೆಗೆ ಸ್ಪಷ್ಟನೆ ಕೋರಿದೆ. ನಂತರ ಆಯ್ಕೆ ಬಗ್ಗೆ ನಿರ್ಧರಿಸುವುದಾಗಿ ಹೇಳಿದೆ. ಭಾರತದ ವಿರುದ್ಧದ ಟ್ವೆಂಟಿ 20 ಪಂದ್ಯ ಜೂನ್ 4ರಂದು ನಡೆಯಲಿದ್ದು, ಮೊದಲ ಏಕದಿನ ಪಂದ್ಯಗಳು ಜೂ.6 ಮತ್ತು 8ರಂದು ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಿಗದಿಯಾಗಿದೆ. ಐಪಿಎಲ್ ನಲ್ಲಿ ಆಡಿದ ಕಿರೋನ್ ಪೊಲಾರ್ಡ್ ಮತ್ತು ಡ್ವಾಯ್ನೆ ಬ್ರಾವೊ ಏಕದಿನ ತಂಡದಲ್ಲಿ ಮಾತ್ರ ಆಯ್ಕೆಯಾಗಿದ್ದಾರೆ.

ವೆಸ್ಟ್‌ಇಂಡೀಸ್ ಟ್ವೆಂಟಿ 20 ತಂಡ: ಡರೆನ್ ಸಮ್ಮಿ(ನಾಯಕ), ಕ್ರಿಸ್ಟೋಫರ್ ಬಾರ್ನ್‌ವೆಲ್, ದೇವೇಂದ್ರ ಬಿಶೊ, ಡರೆನ್ ಬ್ರಾವೊ, ಆಂಡ್ರೆ ಫ್ಲೆಚೆರ್, ಡಂಝಾ ಹ್ಯಾಟ್, ಅಶ್ಲೆ ನರ್ಶ್, ರವಿ ರಾಂಪಾಲ್, ಆ್ಯಂಡ್ರೆ ರಸ್ಸೆಲ್, ಮಾರ್ಲೊನ್ ಸ್ಯಾಮುವೆಲ್ಸ್, ಕ್ರಿಶ್‌ಮಾರ್ ಸಾಂಟೊಕಿಯಾ, ಲೆಂಡ್ಲೆ ಸಿಮೊನ್ಸ್.

ಏಕದಿನ ತಂಡ: ಡರೆನ್ ಸಮ್ಮಿ (ನಾಯಕ), ಡ್ವೆಯ್ನೆ ಬ್ರಾವೊ(ಉಪನಾಯಕ), ಕಿರೊನ್ ಪೊಲಾರ್ಡ್,ಕಾರ್ಲ್ಟನ್ ಬೌ, ಅಂಟನಿ ಮಾರ್ಟಿನ್, ದೇವೆಂದ್ರ ಬಿಶೊ, ಡರೆನ್ ಬ್ರಾವೊ, ಕಿರ್ಕ್ ಎಡ್ವರ್ಡ್,ರವಿ ರಾಂಪಾಲ್, ಆಆಂಡ್ರ್ಯೂರಸ್ಸೆಲ್, ಮಾರ್ಲೊನ್ ಸಾಮುವೆಲ್ಸ್, ರಾಮನರೇಶ್ ಸರವಣ್,ಲಿಂಡ್ಲೆ ಸಿಮೊನ್ಸ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+