ಗುರುಟೀಕ್: ಮೋಸ ಹೋದವರು ಠಾಣೆಗೆ ದೂರು ನೀಡಿ
ಮಂಗಳೂರು,
ಮೇ 31: ಮೈಸೂರಿನ ಗುರುಟೀಕ್ ಇನ್‌ವೆಸ್ಟ್‌ಮೆಂಟ್ ಸಂಸ್ಥೆಯಿಂದ ರಾಜ್ಯಾದ್ಯಂತ ಮೋಸ ಹೋದವರೆನ್ನಲಾದ ಹೂಡಿಕೆದಾರರಿಗೆ ದೂರುಗಳನ್ನು ಸಲ್ಲಿಸಲು ರಾಜ್ಯ ಸರಕಾರ ಅವಕಾಶ ಕಲ್ಪಿಸಿದೆ. id="toptextpromo">ಇತ್ತೀಚೆಗೆ
ಹೊರಡಿಸಿರುವ ಪ್ರಕಟನೆಯ ಪ್ರಕಾರ ವಂಚನೆಗೊಳಗಾದ ಹೂಡಿಕೆದಾರರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸ ಬಹುದಾಗಿದೆ. ಎಲ್ಲಾ ದೂರುಗಳನ್ನು ಸಂಗ್ರಹಿಸಿ ವಿಚಾರಣೆ ನಡೆಸಲು ಉದ್ದೇಶಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಕಂಪನಿ
ಕಾಯ್ದೆಯಡಿ ಅನುಮೋದನೆ ಪಡೆದು ವ್ಯವಹಾರ ಆರಂಭಿಸಿದ ಗುರು ಟೀಕ್ ಸಂಸ್ಥೆಯು 4,80,000 ಕ್ಕೂ ಅಧಿಕ ಹೂಡಿಕೆದಾರರಿಂದ 100 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹಿಸಿ ಹಲವು ಮಂದಿಗೆ ಹಣ ಹಿಂತಿರುಗಿಸದೆ ವಂಚನೆ ಎಸಗಿದ ಬಗ್ಗೆ ಸರಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ರಕ್ಷಣೆ ಒದಗಿಸಲು ಮುಂದಾದ ಸರಕಾರ ಪೊಲೀಸ್ ಠಾಣೆಗಳಲ್ಲಿ ದೂರು ಸ್ವೀಕರಿಸಲು ವ್ಯವಸ್ಥೆ ಮಾಡಿದೆ.











Click it and Unblock the Notifications