ಬೆಂಗಳೂರಿನಲ್ಲಿ 'ಮಿತಿಮೀರಿದ' ಮಂಗಳಮುಖಿಯರ ಕಾಟ

ಇವರು ರಸ್ತೆಗಳಲ್ಲಿ, ಸಿಗ್ನಲ್‌ಗಳಲ್ಲಿ ಅಶ್ಲೀಲ ಭಾವಭಂಗಿ ಪ್ರದರ್ಶಿಸಿ, ಹಣ ಕಸಿಯುತ್ತ, ನಾಗರಿಕರಿಗೆ ಮುಜುಗರ, ತೊಂದರೆ ನೀಡುತ್ತಿದ್ದಾರೆ. ಪ್ರತಿ ಸಿಗ್ನಲ್‌ನಲ್ಲಿ 4-5 ಮಂಗಳಮುಖಿಯರು ಇರುತ್ತಾರೆ. ಇದೊಂದು ಲಾಭದಾಯಕ ದಂಧೆ ಎಂದು ಮನಗಂಡು ಕೆಲ ಪುರುಷರು ಮಂಗಳಮುಖಿಯರ ವೇಷ ಧರಿಸಿ ಭಿಕ್ಷಾಟನೆಗೆ ಇಳಿದಿದ್ದಾರೆ.
ಇವರು ಕೇಳಿದಾಗ ಹಣ ಕೊಡದಿದ್ದಲ್ಲಿ ಬೈಗುಳ ಬೇರೆ. ಕೆಲವರು ರಾತ್ರಿ ವೇಳೆ ನಾಗರಿಕರನ್ನು ಬೆದರಿಸಿ ಹಣ, ಒಡವೆ ಕಿತ್ತುಕೊಂಡಿರುವ ಘಟನೆಗಳು ವರದಿಯಾಗಿವೆ. ಬಹುತೇಕ ಮಂಗಳಮುಖಿಯರು ವೇಶ್ಯಾವಾಟಿಕೆಯಲ್ಲಿಯೂ ತೊಡಗಿಕೊಂಡಿರುತ್ತಾರೆ. ಇವರ ಹಾವಳಿ ತಪ್ಪಿಸಲು ಹಿಂದಿನ ಪೊಲೀಸ್ ಆಯುಕ್ತ ಶಂಕರ್ ಬಿದರಿ ಕೆಲ ಮಟ್ಟಿನ ಪ್ರಯತ್ನ ಮಾಡಿದ್ದರು. ಅದು, ಪರಿಣಾಮಕಾರಿಯಾದಂತೆ ಕಾಣುವುದಿಲ್ಲ.
ಈ ಮಧ್ಯೆ ಕೇಂದ್ರ ಸರ್ಕಾರ 2011ರ ಜನಗಣತಿಯಲ್ಲಿ ದ್ವಿಲಿಂಗಿಗಳನ್ನು ಗುರುತಿಸಿ ಅವರಿಗಾಗಿ ಕಲ್ಯಾಣ ಯೋಜನೆ ರೂಪಿಸುವುದಕ್ಕೆ ಸಿದ್ಧತೆ ನಡೆಸಿದೆ. ಅವರಲ್ಲಿ ಜಾಗೃತಿ ಬೆಳೆಸಿ ಸಮಾಜದ ಮುಖ್ಯ ವಾಹಿನಿಗೆ ತರಲು ಯತ್ನಿಸಬೇಕು. ಅನೈತಿಕ ಚಟುವಟಿಕೆ, ಭಿಕ್ಷಾಟನೆ, ಸುಲಿಗೆಯಲ್ಲಿ ತೊಡಗಿಕೊಂಡ ಮಂಗಳಮುಖಿಯರಿಗೆ ಕಾನೂನಿನ ರುಚಿಯನ್ನೂ ತೋರಿಸಬೇಕು.
ಮಂಗಳಮುಖಿಯರಿಂದ ಜೆಪಿ ನಗರದಲ್ಲಿ ಹಲ್ಲೆ : ಕಾಸು ಕೊಡದ ಮೊಬೈಲ್ ಅಂಗಡಿ ಮಾಲೀಕನ ಮೇಲೆ ಮೂವರು ಮಂಗಳಮುಖಿಯರು ಹಲ್ಲೆ ನಡೆಸಿ ಪೊಲೀಸರ ಅತಿಥಿಗಳಾದ ತಾಜಾ ಘಟನೆಯೂ ಇಲ್ಲಿದೆ.
ಜೆಪಿ ನಗರ 7ನೇ ಹಂತದ ಶ್ರೀರಾಮ ಬಡಾವಣೆಯಲ್ಲಿ ಮೊಬೈಲ್ ಅಂಗಡಿಯಿಟ್ಟುಕೊಂಡಿರುವ ಮುತ್ತುಕುಮಾರ್ ಹಲ್ಲೆಗೊಳಗಾದವರು. ಈ ಸಂಬಂಧ ಶರ್ಮಿಳಾ, ಅಮೃತಾ, ಪಿಂಟೊ ಕಿರಣ ಎಂಬ ಮೂವರನ್ನು ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications