ತಂಬಾಕು ನಿಷೇಧಿಸಿ, ಪ್ರಧಾನಿಗೆ ಪತ್ರ ಬರೆದ ಕ್ಯಾನ್ಸರ್ ಪೀಡಿತ

ತಂಬಾಕು ಉತ್ಪನ್ನಗಳ ಪ್ಯಾಕೇಟ್ ಗಳಲ್ಲಿ ಕ್ಯಾನ್ಸರ್ ಪೀಡಿತ ಬಾಯಿ, ತುಟಿ ಇತ್ಯಾದಿಗಳ ಚಿತ್ರ ಪ್ರಕಟಿಸಲು ಸರಕಾರ ನಿರ್ಧರಿಸಿದೆ. ಆದರೆ ಈ ರೀತಿ ಮಾಡಿದರೆ ಪ್ರಯೋಜನವಿಲ್ಲ. ಇದನ್ನು ದಯವಿಟ್ಟು ಸಂಪೂರ್ಣವಾಗಿ ನಿಷೇಧಿಸಿ ಎಂದು ರಾಹುಲ್ ಭಾರದ್ವಾಜ್ ಪತ್ರಬರೆದಿದ್ದಾರೆ.
ಪ್ರಧಾನ ಮಂತ್ರಿ, ಆರೋಗ್ಯ ಸಚಿವರು, ರಾಷ್ಟ್ರಪತಿ ಸೇರಿದಂತೆ ಹಲವು ಪ್ರಮುಖರಿಗೆ ಪತ್ರ ಬರೆಯಲಾಗಿದೆ. ಹತ್ತು ಮೀಟರಿಗೊಂದು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನೋಡಲಾಗುತ್ತಿಲ್ಲ ಎಂದಿದ್ದಾನೆ.
ಪ್ರಮುಖವಾಗಿ ಶಾಲೆಗಳ ಆಸುಪಾಸಿನಲ್ಲಂತೂ ಮಾರಾಟ ಮಾಡಲೇಬಾರದು. ತಂಬಾಕಿನಿಂದ ಉಂಟಾಗುವ ಕೆಲವು ಕೋಟಿ ರು. ಲಾಭಕ್ಕಾಗಿ ಇಷ್ಟೊಂದು ಜನರನ್ನು ಬಲಿ ನೀಡಬೇಕೇ ಹೀಗೆ ಹಲವು ಪ್ರಶ್ನೆಗಳನ್ನು ಪತ್ರದಲ್ಲಿ ಪ್ರಸ್ತಾಪಿಸಿದ್ದಾನೆ.
ರಾಹುಲ್ ಬದುಕು ಸಂಪೂರ್ಣ ಬದಲಾದದ್ದು ಕಳೆದ ಒಂದು ತಿಂಗಳ ನಂತರ. ಅವನಿಗೆ ಬಾಯಿಯ ಕ್ಯಾನ್ಸರ್ ಅಂತಿಮ ಘಟ್ಟದಲ್ಲಿ ಇರುವುದು ತಿಳಿದುಬಂದಿತ್ತು. ಆತನಿಗೆ ಗುಟ್ಕಾ ಜಗಿಯುವ ಅಭ್ಯಾಸವಿತ್ತು. ಅದರಿಂದಲೇ ಕ್ಯಾನ್ಸರ್ ಆರಂಭವಾಗಿದೆ ಎಂದು ಸಾಬೀತಾಗಿತ್ತು.
ಆತನಿಗೆ ಬಾಯಲ್ಲಿ ಕ್ಯಾನ್ಸರ್ ಗಡ್ಡೆಗಳು ಕಾಣಿಸಿಕೊಂಡಿದೆ. ಸುಮಾರು 12 ಗಂಟೆಗಳ ಸರ್ಜರಿ ಮಾಡಿ ನಾವು ಎಲ್ಲಾ ಪ್ರಯತ್ನ ಮಾಡಿದ್ದೇವೆ. ಆತ ಐದು ವರ್ಷಕ್ಕಿಂತ ಹೆಚ್ಚು ವರ್ಷ ಬದುಕುವ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ ಎಂದು ಆತನಿಗೆ ಚಿಕಿತ್ಸೆ ನೀಡಿದ ಡಾಕ್ಟರ್ ಪಂಕಜ್ ಚತುರ್ವೇದಿ ಹೇಳುತ್ತಾರೆ.












Click it and Unblock the Notifications