ಕಾಂಗ್ರೆಸ್ ಕಚೇರಿಯಲ್ಲಿ ಕೆಲಸದ ಆಮಿಷ, ಲಕ್ಷ ಲಕ್ಷ ಪಂಗನಾಮ

ಕಾಂಗ್ರೆಸ್ ಕಚೇರಿಗೆ ಸಿಬ್ಬಂದಿ ಬೇಕಾಗಿದ್ದಾರೆ
ನವದೆಹಲಿ, ಮೇ 27: ಕಾಂಗ್ರೆಸ್ ಕಚೇರಿಗೆ ಸಿಬ್ಬಂದಿ ಬೇಕಾಗಿದ್ದಾರೆ. ಅರೇ ಕೆಲಸ ಖಾಲಿ ಇದೆ ಅಂತ ತಕ್ಷಣ ಅರ್ಜಿ ಗುಜರಾಯಿಸಬೇಡಿ. ರಜನ್ ಸಿಂಗ್ ಎಂಬ ವ್ಯಕ್ತಿಯು ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ(ಎಐಸಿಸಿ)ನಲ್ಲಿ ಹಲವು ಪ್ರಮುಖ ಉದ್ಯೋಗವಿದೆ ಎಂದು 14 ಜನರಿಗೆ ವಂಚಿಸಿದ್ದಾನೆ. ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಉದ್ಯೋಗ ಪಡೆಯಲು ಅವರೆಲ್ಲರಿಗೂ ಒಟ್ಟು 5.45 ಲಕ್ಷ ರು. ಟೋಪಿ ಹಾಕಿದ್ದಾನೆ.

ಕೆಲಸ ದೊರಕಬೇಕಾದರೆ ಎನ್ ಜಿಒ ಸಂಸ್ಥೆಯಲ್ಲಿ ದುಡಿದ ಅನುಭವ ಅಗತ್ಯ ಅಂತ ಅವರೆಲ್ಲರನ್ನೂ ಆತ ಡಿಸೆಬಲಡ್ ವೆಲ್ ಫೇರ್ ಸೊಸೈಟಿ ದೆಹಲಿ ಎಂಬ ಎನ್ ಜಿಒಗೆ ಸದಸ್ಯರನ್ನಾಗಿ ಮಾಡಿದ್ದ. ಆ ಸಂಸ್ಥೆ ಕೂಡ ಬೋಗಸ್.

ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕೆಲಸ ದೊರಕಿದರೆ ಒಳ್ಳೆಯದು ಅಂತ ಇವರೆಲ್ಲರೂ ಈತನ ಮಾತಿಗೆ ಮರುಳಾಗಿದ್ದಾರೆ. ಆತ ನಾಟಕದ ಮೇಲೆ ನಾಟಕ ಮಾಡುತ್ತ ಹೋಗಿದ್ದಾನೆ.

ಹಾಗಂತ ಅವನು ದುಡ್ಡು ಕೇಳಿದ ತಕ್ಷಣ ಹಣ ನೀಡಲು ಇವರೆಲ್ಲರೂ ಮೂರ್ಖರಲ್ಲ. ಆತ ಅವರೆಲ್ಲರನ್ನೂ ಒಂದು ದಿನ ಕಾಂಗ್ರೆಸ್ ಶಾಸಕ ಪರ್ವೆಜ್ ಹಸ್ಮಿನಿ ಕಚೇರಿಗೆ ಕರೆದೊಯ್ದಿದ್ದ. ಆದರೆ ಅಂದು ಅಲ್ಲಿ ಶಾಸಕನಿರಲಿಲ್ಲ. ಆಮೇಲೆ ಹಸ್ಮಿನ್ ಪಿಎ ಎಸ್ ಎಸ್ ಶರ್ಮಾ ಎಂಬವರನ್ನು ಭೇಟಿ ಮಾಡಿಸಿದ್ದ.

ಹಸ್ಮಿನ್ ಪಿಎ ವೇಷದಲ್ಲಿದ್ದ ವ್ಯಕ್ತಿ ಎಸ್ಎಸ್ ಶರ್ಮಾ. "ನೀವು ರಜನ್ ಸಿಂಗ್ ಗೆ ಹಣ ಪಾವತಿಸಿದರೆ ಕಾಂಗ್ರೆಸ್ ನಲ್ಲಿ ಕೆಲಸ ಮಾಡಿಕೊಡುವುದಾಗಿ" ಭರವಸೆ ನೀಡಿದ. ಇದಕ್ಕಾಗಿ [email protected] ಇಮೇಲ್ ಐಡಿಯಿಂದ ಇಮೇಲ್ ಮಾಡಿ ಉದ್ಯೋಗ ನೀಡುವುದನ್ನು ಖಾತ್ರಿ ಪಡಿಸಿದ್ದ" ಎಂದು ಹಣ ಕಳೆದುಕೊಂಡ ವ್ಯಕ್ತಿಯೊಬ್ಬರು ಹೇಳುತ್ತಾರೆ.

ಇನ್ನು ದುಡ್ಡು ನೀಡಿ ಕೆಲಸಕ್ಕೆ ಸೇರಿಕೊಳ್ಳಿ ಅಂದಾಗ ಇವರು ತಡ ಮಾಡಲಿಲ್ಲ. ಕೆಲವರು 85 ಸಾವಿರ, ಇನ್ನು ಕೆಲವರು ಒಂದು ಲಕ್ಷ ರು. ನೀಡಿದ್ದರು. ಆಮೇಲೆ ಜಾಬ್ ಲೆಟರ್ ಗಾಗಿ ಆತನಿಗೆ ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

ಈ ಅಸಾಮಿ ಎಲ್ಲಿಗೆ ಹೋದ ಅಂತ ಪೇಚಾಡಿದ ಇವರೆಲ್ಲರೂ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದಾರೆ. ಆದರೆ ಅಲ್ಲಿ ಅಂತಹ ಯಾವುದೇ ಕೆಲಸ ಖಾಲಿ ಇಲ್ಲ. ಇವರಿಗೆ ಬಂದ ಇಮೇಲ್ ಕೂಡ ನಕಲಿ ಎಂದು ತಿಳಿಯಿತು. ಎಲ್ಲರಿಗೂ ಮೋಸ ಹೋಗಿರುವುದು ಖಾತ್ರಿಯಾಗಿ ತಲೆ ಮೇಲೆ ಕೈಯಿಟ್ಟುಕೊಂಡರು.

ಅಸಲಿಗೆ ಪರ್ವೆಜ್ ಹಸ್ಮಿನಿಗೆ ಎಸ್ಎಸ್ ಶರ್ಮಾ ಎಂಬ ಪಿಎ ಕೂಡ ಇರಲಿಲ್ಲ. ಸುಮಾರು 5.45 ಲಕ್ಷ ಕಳೆದುಕೊಂಡ 14 ಜನರು ದೆಹಲಿಯ ಸಂಗಮ್ ವಿಹಾರ್ ಪೋಲಿಸ್ ಸ್ಟೇಷನ್ ಗೆ ದೂರು ನೀಡಿದ್ದಾರೆ. ಇದೀಗ ಚಾಣಾಕ್ಷ್ಮ ಅಪರಾಧಿಯ ಭೇಟೆ ಆರಂಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+