ಎಟಿಎಂ ದೋಚಲು ಹೋದ ಗುಲ್ಬರ್ಗ ಪೊಲೀಸ್ ಅರೆಸ್ಟ್
ಆಳಂದ
(ಗುಲ್ಬರ್ಗ), ಮೇ 27: ಇಲ್ಲಿಯ ಪೊಲೀಸರು ಗುರುವಾರ ಬೆಳಗಿನ ಜಾವ ಸಿಂಡಿಕೇಟ್ ಬ್ಯಾಂಕಿನ ಎಟಿಎಂ ಒಡೆದು ಹಣ ಲೂಟಿ ಮಾಡಲು ವಿಫಲ ಯತ್ನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಬ್ಯಾಂಕ್‌ನಲ್ಲಿರುವ ಸಿ.ಸಿ. ಕ್ಯಾಮರಾದಲ್ಲಿ ಈ ಕೃತ್ಯ ಚಿತ್ರೀಕರಣಗೊಂಡಿದೆ. ಛೆ, ಇವರೆಂಥಾ ಪೊಲೀಸರಪ್ಪ! ಎಟಿಎಂನಲ್ಲಿ ಕ್ಯಾಮೆರಾ ಇರುತ್ತದೆ ಎಂಬ ಸಾಮಾನ್ಯ ಜ್ಞಾನವೂ ಇವರಗಿಲ್ಲದೇ ಹೋಯಿತೇ? id="toptextpromo">ಇವರು
ಘನಂದಾರಿ ಕೆಲಸ ಏನ್ಮಾಡಿದರೆಂದರೆ... ಪಟ್ಟಣದ ಮುಖ್ಯ ಬೀದಿಯಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸ್ ಪೇದೆಗಳಾದ ವೆಂಕಟೇಶ ಗುಲಬರ್ಗಾ ಹಾಗೂ ಅಂಬಾರಾಯ ಚಿಂಚನಸೂರ ಗುರುವಾರ ನಸುಕಿನ 3.52ಕ್ಕೆ ಎಟಿಎಂ ಕೇಂದ್ರಕ್ಕೆ ನುಗ್ಗಿ ಎಟಿಎಂ ಬಾಕ್ಸ್ ಒಡೆದು, ಹಣ ದೋಚುವ ಪ್ರಯತ್ನ ಫಲಕಾರಿಯಾಗದಿದ್ದಾಗ ಬಿಟ್ಟು ಪರಾರಿಯಾಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪ್ರಕರಣದ
ಬಗ್ಗೆ ಬ್ಯಾಂಕ್ ವ್ಯವಸ್ಥಾಪಕ ಎಂ.ಕೆ.ಪ್ರಧಾನ್ ಸ್ಥಳಿಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಶರಣಬಸವೇಶ್ವರ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ ಮಧುಕರ ಪವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.











Click it and Unblock the Notifications