ಬ್ಯಾಂಕಾಕ್ ಪ್ರವಾಸ ಆಮಿಷ : ವಂಚಕರ ಬಂಧನ

ಕನ್ನಿಂಗ್‌ಹ್ಯಾಂ ರಸ್ತೆಯ ಪ್ರಸ್ಟೀಜ್ ಸೆಂಟರ್ ಪಾಯಿಂಟ್‌ನಲ್ಲಿ ಕಚೇರಿ ತೆರೆದು 'ಸ್ಮಾರ್ಟ್ ಟ್ರಿಪ್' ವೆಬ್‌ಸೈಟ್ ಮೂಲಕ ವಿದೇಶಿ ಪ್ರವಾಸದ ಆಮಿಷವೊಡ್ಡಿ ಹಣ ಪಡೆಯುತ್ತಿದ್ದರು. ದೇವಪ್ರಕಾಶ್, ಟಿ.ಬಾಲಚಂದರ್, ಕೆ. ಪ್ರಶಾಂತ್ ಬಂಧಿತರು. ದಾಳಿ ಸಂದರ್ಭದಲ್ಲಿ 1.46 ಲಕ್ಷ ರೂ. ನಗದು, 5 ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
10 ಸಾವಿರ ರೂ. ಸದಸ್ಯ ಶುಲ್ಕ ಪಡೆಯುತ್ತಿದ್ದ ಆರೋಪಿಗಳು ನಂತರ ಸದಸ್ಯತ್ವ ಪಡೆದವರು ತಮ್ಮ ಕಡೆಯಿಂದ ಮತ್ತಿಬ್ಬರ ಸದಸ್ಯತ್ವ ಮಾಡಿಸಿದರೆ ಬ್ಯಾಂಕಾಕ್ ಪ್ರವಾಸ ಪ್ಯಾಕೇಜ್ ಬಹುಮಾನವಾಗಿ ದೊರೆಯಲಿದೆ ಎಂಬ ಆಮಿಷವೊಡ್ಡುತ್ತಿದ್ದರು.
ಇಬ್ಬರಿಗಿಂತ ಹೆಚ್ಚಿನ ಸದಸ್ಯತ್ವ ಮಾಡಿಸಿದರೆ ಮತ್ತಷ್ಟು ಬಹುಮಾನ ನೀಡುವ ಆಸೆ ತೋರಿಸಿ ಹಣ ಪಡೆದು ಮೋಸ ಮಾಡುತ್ತಿದ್ದರು. ತಂಡದ ಇನ್ನೂ ಮೂವರು ಆರೋಪಿಗಳಾದ ಮಹೇಶ್ ಲೋಗನಾಥನ್, ಸಂತೋಷ್ ಸುಮೊ ಮತ್ತು ಸುರೇಶ್‌ಕುಮಾರ್ ಗೌರಿಶೆಟ್ಟಿ ಎಂಬುವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications