ಸಿಂದಗಿ ಬಳಿ ಭೀಕರ ಅಪಘಾತ, ಸ್ಥಳದಲ್ಲೇ 10 ಸಾವು

Accident near Sindagi in Bijapur
ಬಿಜಾಪುರ/ಸಿಂದಗಿ, ಮೇ, 27 : ಸಿಮೆಂಟು ತುಂಬಿದ್ದ ಲಾರಿ ಮತ್ತು ಟಂಟಂ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ 10 ಜನರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಿಂಧಗಿಯ ಮೊರಟಗಿ ಬಳಿ ಶುಕ್ರವಾರ ಮುಂಜಾನೆ ಸಂಭವಿಸಿದೆ.

ಮೃತರಲ್ಲಿ 9 ಜನರು ಗಬಸಾವಳಿಯಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಅಡುಗೆ ಮಾಡಲು ಟಂಟಂ ಆಟೋದಲ್ಲಿ ಹೊರಟವರು ಎನ್ನಲಾಗಿದ್ದು, ಮತ್ತೋರ್ವ ಪಾದಾಚಾರಿ ಎಂದು ತಿಳಿದುಬಂದಿದೆ.

ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಡಾ. ಡಿ.ಸಿ ರಾಜಪ್ಪ ಅವರು ನೀಡಿದ ಮಾಹಿತಿ ಪ್ರಕಾರ, ಈ ಅಪಘಾತದಲ್ಲಿ ಮೃತರು ಸಿಂದಗಿಯ ಸ್ಲಂ ನಿವಾಸಿಗಳಾದ ಸಿದ್ದಮ್ಮ ನಿಂಗಪ್ಪ ಹಡಪದ (35), ದಾನಮ್ಮ ಶ್ರೀಶೈಲ ಸೊನ್ನದ (36), ಗುರುರಾಜ ಶ್ರೀಶೈಲ ಸೊನ್ನದ (13), ಶಾಂತಾಬಾಯಿ ಬಸಪ್ಪ ಕುಂಬಾರ (45), ಜಗದೇವಿ ಗುರುಶಾಂತಪ್ಪ ಹಡಪದ (35), ಶಂಕ್ರಮ್ಮ ಮಲ್ಲಿಕಾರ್ಜುನ ಹಡಪದ (40), ಸುನೀಲ ಶಂಕರ ಧನಪಾಲ (25), ಗುರವ್ವ ಅಖಂಡಪ್ಪಗೋಳ (42), ರುಕ್ಮುಬಾಯಿ ಮಲ್ಲಿನಾಥ ಸೋಮಜ್ಯಾಳ, ಬೋಸಗಿ (40), ಸಾ. ಕನ್ನೊಳ್ಳಿ, ಚಾಲಕ ಮಲ್ಲನಗೌಡ ಬಿರಾದಾರ (50).

ಶುಕ್ರವಾರ ನಸುಕಿನಲ್ಲೇ ಪ್ರಯಾಣ ಪ್ರಾರಂಭಿಸಿದ್ದ 9 ಜನ ಅಡುಗೆಗಾರರು ಮದುವೆ ಮಂಟಪ ಸೇರದೇ ಮಸಣಕ್ಕೆ ಸೇರಿದ್ದು ಅನೇಕರ ಹೃದಯ ಕಲುಕುವಂತಿತ್ತು. ಎಲ್ಲರೂ ಆಟೋದಲ್ಲೇ ಅಪ್ಪಚ್ಚಿಯಾಗಿದ್ದರು. ಪೊಲೀಸರು ಮತ್ತು ಸ್ಥಳೀಯರು ಸಾಕಷ್ಟು ಪ್ರಯಾಸಪಟ್ಟು ಮೃತ ದೇಹಗಳನ್ನು ಹೊರ ತೆಗೆದರು.

ಶಾಸಕರ ಭೇಟಿ : ಸ್ಥಳೀಯ ಶಾಸಕ ರಮೇಶ ಭೂಸನೂರ ಅವರು ಸ್ಥಳಕ್ಕೆ ಆಗಮಿಸಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಘಟನೆ ಕುರಿತು ಸಮಗ್ರ ತನಿಖೆ ನಡೆಸಲು ಸಿಂಧಗಿ ಪೊಲೀಸರಿಗೆ ಆದೇಶ ನೀಡಿದರು. ಸಿಂಧಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+