ಉಪನ್ಯಾಸಕಿ ಆತ್ಮಹತ್ಯೆ: ಕೊನೆಗೂ ಉಪನ್ಯಾಸಕನ ಸೆರೆ

Lecturer Sujatha suicide
ಮಂಗಳೂರು, ಮೇ 26: ಮೂರು ವರ್ಷಗಳ ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯದ ಕಿರಿಯ ಉಪನ್ಯಾಸಕಿ ಸುಜಾತ ಅವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಉಪನ್ಯಾಸಕ ಪ್ರೊ. ಅಬ್ದುಲ್‌ ರಶೀದ್‌ ಅವರನ್ನು ಪೊಲೀಸರು ಮೈಸೂರಿನಲ್ಲಿ ವಶಕ್ಕೆ ತೆಗೆದುಕೊಂಡು ಬುಧವಾರ ಬಂಧಿಸಿದ್ದಾರೆ.

ಮಂಗಳೂರಿನ 2 ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪಣಂಬೂರು ಡಿ.ಸಿ.ಪಿ. ಪುಟ್ಟಮಾದಯ್ಯ, ಇನ್ಸ್‌ಪೆಕ್ಟರ್ ವೆಲೆಂಟೈನ್‌ ಡಿ ಸಿಲ್ವಾ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಪ್ರೊ. ರಶೀದ್‌ ಪ್ರಸ್ತುತ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ (ಎರವಲು ಸೇವೆ) ಉಪನ್ಯಾಸಕರಾಗಿದ್ದಾರೆ.

ಪ್ರಕರಣದ ವಿವರ: ಪಿ.ಎಚ್‌ಡಿ. ಅಧ್ಯಯನ ನಡೆಸುತ್ತಿದ್ದ ಸುಜಾತಾಗೆ ರಶೀದ್ ಗೈಡ್ ಆಗಿದ್ದರು. ರಶೀದ್ ತನಗೆ ಅಶ್ಲೀಲ ಇ-ಮೇಲ್ ಕಳಿಸುವುದರ ಜತೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತ ಸುಜಾತಾ, ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸುಜಾತಾ ಅವರು 2008 ಮಾರ್ಚ್‌ 29 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂದರ್ಭದಲ್ಲಿ ಆಕೆ ಪತ್ರವೊಂದನ್ನು ಬರೆದಿದ್ದರು. ಅದರಲ್ಲಿ ರಶೀದ್‌ ಸಹಿತ 5 ಮಂದಿ ಆರೋಪಿಗಳನ್ನು ಹೆಸರಿಸಿದ್ದರು. ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಮತ್ತು ಆಕೆಯ ಗಂಡ ಆರೋಪಿಗಳ ವಿರುದ್ಧ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು. ಕೊಣಾಜೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+