ಉಡುಪಿ ಜಿಲ್ಲಾಡಳಿತಕ್ಕೆ ತ್ರಿವಳಿ ವೈದ್ಯರಿಂದ ಚಿಕಿತ್ಸೆ!

Acharya
ಉಡುಪಿ, ಮೇ 26: ಈ ಹಿಂದೆ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವೆ, ಜಿ.ಪಂ, ತಾ.ಪಂ. ಅಧ್ಯಕ್ಷೆ ಹೀಗೆ ಏಕಕಾಲದಲ್ಲಿ ಪ್ರಮೀಳಾ ರಾಜ್ಯಭಾರ ಇತ್ತು. ಅನಂತರ ಜಿಲ್ಲಾಧಿಕಾರಿಯಾಗಿ ಪತಿ ಮತ್ತು ಜಿ.ಪಂ. ಸಿಇಒ ಆಗಿ ಪತ್ನಿ ಆಡಳಿತ ನಡೆಸಿದರು. ಈಗ ವೈದ್ಯರ ಸರದಿ.

ತ್ರಿವಳಿ ವೈದ್ಯರು ಉಡುಪಿ ಜಿಲ್ಲಾಡಳಿತಕ್ಕೆ ಚಿಕಿತ್ಸೆ ನೀಡಲು ಶಸ್ತ್ರ ಸಜ್ಜಿತರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೀಗೆ ಮೂವರೂ ವೈದ್ಯಕೀಯ ವಿಜ್ಞಾನ ಪದವೀಧರರು.

ನೂತನ ಜಿಲ್ಲಾಧಿಕಾರಿ ಡಾ. ಎಂ.ಟಿ. ರೆಜು ಹೋಮಿಯೋಪತಿ ವೈದ್ಯರಾದರೆ, ಎರಡು ತಿಂಗಳ ಹಿಂದೆ ನಿಯುಕ್ತರಾಗಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಕಾರಿ ಡಾ. ರವಿಕುಮಾರ್, ಎಂಬಿಬಿಎಸ್‌ ಪದವೀಧರರು. ಡಾ. ರೆಜು ಅವರು ಪ್ರಥಮ ಬಾರಿ ಜಿಲ್ಲಾಧಿಕಾರಿಯಾದರೆ ಡಾ. ರವಿಕುಮಾರ್ ಪ್ರಥಮ ಬಾರಿ ಎಸ್ಪಿಯಾಗಿರುವುದು ವಿಶೇಷ. ಡಾ. ರವಿಕುಮಾರ್ ವೈ.ಎಸ್‌. ಅವರು ಮೂಲತಃ ಭದ್ರಾವತಿಯವರು. ಬೆಂಗಳೂರಿನಲ್ಲಿ ಎಂಬಿಬಿಎಸ್‌ ಶಿಕ್ಷಣ ಪಡೆದಿದ್ದಾರೆ.

ಇನ್ನು, ಕರಾವಳಿ ಭಾಗದ ಚಿರಪರಿಚಿತ ಸಚಿವ ಡಾ. ವಿ.ಎಸ್‌. ಆಚಾರ್ಯರು ಮೂಲತಃ ವೈದ್ಯಕೀಯ ವೃತ್ತಿಯವರು. 1965ರಲ್ಲಿ ಮಣಿಪಾಲದಲ್ಲಿ ಎಂಬಿಬಿಎಸ್‌ ಶಿಕ್ಷಣ ಪಡೆದ ಡಾ. ಆಚಾರ್ಯರು ಸಚಿವರಾಗುವವರೆಗೂ ಊರಿನಲ್ಲಿರುವಾಗ ಮಲ್ಪೆ ಕಲ್ಮಾಡಿಯ ಕ್ಲಿನಿಕ್‌ನಲ್ಲಿ ತಪ್ಪದೆ ರೋಗಿಗಳಿಗೆ ಔಷಧ ಕೊಡುತ್ತಿದ್ದರು. 5 ವರ್ಷಗಳಿಂದ ಉಸ್ತುವಾರಿ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+