ಆಸ್ಪತ್ರೆ ವಿಮಾನ ಮನೆಯ ಮೇಲೆ ಬಿದ್ದು 10 ಮಂದಿ ಭಸ್ಮ

ದೆಹಲಿ ಅಪೊಲೊ ಆಸ್ಪತ್ರೆಗೆ ಸೇರಿದ ಈ ಆಂಬುಲೆನ್ಸ್ ವಿಮಾನ ರೋಗಿಯೊಬ್ಬರ ತುರ್ತು ಚಿಕಿತ್ಸೆಗಾಗಿ ಬುಧವಾರ ರಾತ್ರಿ 9 ಗಂಟೆಗೆ ಪಟ್ನಾ ಬಿಟ್ಟಿತ್ತು. 10.35ರ ಹೊತ್ತಿಗೆ ಇಲ್ಲಿಗೆ ಸಮೀಪದ ಪರ್ವತೀಯ ಕಾಲನಿ ಬಳಿ ಈ ದುರಂತ ಸಂಭವಿಸಿದೆ ಎಂದು ಅಧಿಕೃತ ಮೂಲಗಳು ಳಿಸಿವೆ.
ಚಿಕಿತ್ಸೆಗಾಗಿ ತೆರಳುತ್ತಿದ್ದ ರಾಹುಲ್ ರಾಜ್ (22) ಸಹ ಮೃತಪಟ್ಟಿದ್ದಾರೆ. ಪ್ರತಿಕೂಲ ಹವಾಮಾನ, ಬಲವಾದ ಗಾಳಿ ಬೀಸುತ್ತಿದ್ದರಿಂದ ಅಪಘಾತವಾಗಿದೆ ಎಂದು ತಿಳಿದುಬಂದಿದೆ.
ಅಪಘಾತಕ್ಕೆ ಕೆಲವೇ ಕ್ಷಣಗಳ ಮುನ್ನ ನಿಯಂತ್ರಣ ಕೊಠಡಿಗೆ ಪೈಲಟ್ ಈ ಮಾಹಿತಿ ರವಾನಿಸಿದ್ದಾರೆ. ಅದಾದನಂತರ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಕಡಿತಗೊಂಡಿದೆ. ಸಂಬಂಧಿಸಿದ ಅಧಿಕಾರಿಗಳು, ಡಿಜಿಸಿಎ ಮತ್ತು ನಾಗರಿಕ ವಿಮಾನ ಯಾನ ಖಾತೆಯ ಅಧಿಕಾರಿಗಳು ವಿಮಾನ ಪತನಗೊಂಡಿರುವ ಸ್ಥಳಕ್ಕೆ ಧಾವಿಸಿದ್ದಾರೆ.












Click it and Unblock the Notifications