ಯುಪಿಎಗೆ ಬೆಂಬಲ: ಸೋನಿಯಾ-ಜಯಾ ಅಕ್ಕ ಪಕ್ಕಾ
ಚೆನ್ನೈ,
ಮೇ 25: ಕಾಂಗ್ರೆಸ್- ಡಿಎಂಕೆ ಸಂಬಂಧದಲ್ಲಿ ತಳಮಳ ಸೃಷ್ಟಿಯಾಗಿರುವ ಸಂದರ್ಭದಲ್ಲೇ ಕೇಂದ್ರ ಸರಕಾರಕ್ಕೆ ತಮ್ಮ ಬೆಂಬಲ ಬೇಕೆನಿಸಿದರೆ ಅದನ್ನು ನೀಡಲು ತಾವು ಸಿದ್ಧವಿರುವುದಾಗಿ ಅಣ್ಣಾ ಡಿಎಂಕೆ ನಾಯಕಿ ಹಾಗೂ ತಮಿಳುನಾಡು ಸಿಎಂ ಜಯಲಲಿತಾ ಸುಳಿವು ನೀಡಿದ್ದಾರೆ. id="toptextpromo">ಮೂರನೇ
ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ಮಂಗಳವಾರ ಮೊದಲ ಸುದ್ದಿಗೋಷ್ಠಿ ನಡೆಸಿದ ಜಯಾ ಅವರನ್ನು 'ಯುಪಿಎ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ನವೆಂಬರ್ ನಲ್ಲಿ ಹೇಳಿದ್ದೀರಿ. ಆ ಹೇಳಿಕೆಗೆ ಈಗಲೂ ಬದ್ಧವಿದ್ದೀರಾ?' ಎಂದು ಸುದ್ದಿಗಾರರು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಜಯಾ - ನೀವೇಕೆ ಅದನ್ನು ಕೇಳುತ್ತಿದ್ದೀರಿ. ಕೇಳಬೇಕಾದವರು ಕೇಳುತ್ತಾರೆ ಎಂದು ಮುನಿಸು ತೋರಿದರು. id='are-slot-1' class='oiad oi-axt oiadv'> id='top-searched-articles'>ಎ.ರಾಜಾ
ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಹಿಂದೆಮುಂದೆ ನೋಡುತ್ತಿದ್ದಾಗ, 'ಮೊದಲು ರಾಜಾನನ್ನು ವಜಾ ಮಾಡಿ. ಆಗ ಡಿಎಂಕೆ ಬೆಂಬಲ ವಾಪಸ್ ತೆಗೆದುಕೊಂಡರೆ ನಾನು ಯುಪಿಎಗೆ ಬೆಂಬಲ ನೀಡುತ್ತೇನೆ' ಎಂದು ಕಾಂಗ್ರೆಸ್‌ಗೆ ಬಹಿರಂಗ ಆಹ್ವಾನ ನೀಡಿದ್ದರು.











Click it and Unblock the Notifications