ದಾವೂದ್ ಸಹೋದರನ ಮೇಲೆ ದಾಳಿ: ನಾಲ್ವರ ಬಂಧನ

ಖಯಾಮ್ ಶೇಖ್, ಅಹ್ಮಾದ್ ಮುನ್ಸಿ, ಸಜೀದ್ ಸೆರವಾರ್ ಖಾನ್ ಮತ್ತು ಅದ್ನಾನ್ ಸೈಯದ್ ಬಂಧಿತರು. ಇವರನ್ನು ಮುಂಬೈನ ಮಾರುತಿ ಮಂದಿರ ಸಮೀಪದಲ್ಲಿ ನಿನ್ನೆ ಸಂಜೆ ಬಂಧಿಸಲಾಗಿದೆ ಎಂದು ಎಟಿಎಸ್ ಮುಖ್ಯಸ್ಥ ರಾಕೇಶ್ ಮಾರಿಯಾ ಹೇಳಿದ್ದಾರೆ.
ಮೇ 17ರಂದು ನಡೆದ ಘಟನೆಯ ತನಿಖೆ ಮಾಡಲು ಬಂಧಿತರನ್ನು ಕ್ರೈಮ್ ಬ್ರಾಂಚ್ ವಶಕೊಪ್ಪಿಸಲಾಗಿದೆ. ಶೂಟರ್ ಗಳಿಗೆ ಶೇಖ್ ಮತ್ತು ಮುನ್ಸಿ ಗನ್ ಪೂರೈಸಿರುವುದಾಗಿ ಅನುಮಾನಿಸಲಾಗಿದೆ ಎಂದರು. ಈ ಘಟನೆ ಇಕ್ಬಾಲ್ ಕಚೇರಿ ಸಮೀಪದಲ್ಲಿ ನಡೆದಿತ್ತು. ಈ ದಾಳಿಯಲ್ಲಿ ದಾವೂದ್ ವೈರಿ ಛೋಟಾ ರಾಜನ್ ಹೆಸರು ಕೂಡ ಕೇಳಿ ಬಂದಿತ್ತು.
ಮೇ 17ರಂದು ಎರಡು ಗನ್ ಮ್ಯಾನ್ ಗಳಾದ ಥಾನೆಯ ಸಯ್ಯದ್ ಆಲಿ(29) ಮತ್ತು ನೇಪಾಲದ ಇಂದ್ರಾ ಖತ್ರಿ(27), ಕಾಸ್ಕರ್ ಅಂಗರಕ್ಷಕ ಮತ್ತು ಚಾಲಕರಾದ ಅರೀಫ್ ಸೈಯದ್ ಅಬು ಬುಖಾ(40) ಅವರನ್ನು ಶೂಟ್ ಮಾಡಿ ಕೊಲೆ ಮಾಡಿದ್ದರು.












Click it and Unblock the Notifications