ಜನರಿಗೆ ಕಾಂಗ್ರೆಸ್ ಉತ್ತರ ನೀಡಬೇಕು: ದೇವೇಗೌಡ
ಬೆಂಗಳೂರು,
ಮೇ 24: ನನಗ್ಯಾಕ್ರಿ ನಿರಾಸೆ ಆಗ್ಬೇಕು...? ಬೀದಿಗಿಳಿದು ಹೋರಾಟ ಮಾಡಿದ್ರಲ್ಲಾ ... ರಾಜೀನಾಮೆ ಕೊಡ್ತೀವಿ ಅಂದ್ರಲ್ಲಾ ಅವರನ್ನು ಕೇಳಿ ಏನೇಳ್ತಾರೆ ಅಂತ.... ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂಬ ರಾಜ್ಯಪಾಲರ ಶಿಫಾರಸನ್ನು ಕೇಂದ್ರ ಸರಕಾರ ತಿರಸ್ಕರಿಸಿದ್ದಕ್ಕೆ ಸುದ್ದಿಗಾರರು ಪ್ರತಿಕ್ರಿಯೆ ಕೇಳಿದಾಗ ಮಾಜಿ ಪ್ರಧಾನಿ ದೇವೇಗೌಡ ಅವರು ಸೋಮವಾರ ಹೀಗೆ ಹೇಳಿದ್ದಾರೆ. id="toptextpromo">ವರದಿ
ತಿರಸ್ಕಾರದಿಂದ ನಿರಾಸೆಯಾಗಿಲ್ಲವೇ ಎಂದು ಮತ್ತೆ ಪ್ರಶ್ನಿಸಿದಾಗ, ಯಾರಿಗೆ ನಿರಾಸೆಯಾಗಬೇಕ್ರಿ...ನಾನು ಇಂತಹವರನ್ನೆಲ್ಲ ತುಂಬಾ ನೋಡಿದ್ದೀನಿ. ನಮ್ಮದು ಪ್ರಾದೇಶಿಕ ಪಕ್ಷ. ರಾಷ್ಟ್ರೀಯ ಪಕ್ಷ ಎಂದು ಹೇಳಿಕೊಳ್ಳುತ್ತಾರಲ್ಲ ಅವರು ಉತ್ತರ ಕೊಡಬೇಕು, ನಾವಲ್ಲ ಎಂದು ತಿರುಗೇಟು ನೀಡಿದರು. id='are-slot-1' class='oiad oi-axt oiadv'> id='top-searched-articles'>ಕೇಂದ್ರದ
ನಿರ್ಧಾರದಿಂದ ನಾವೇನೂ ಧೃತಿಗೆಡುವುದಿಲ್ಲ. ಯಡಿಯೂರಪ್ಪ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಯಲಿದೆ. ರಾಜ್ಯಪಾಲರ ಶಿಫಾರಸಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ದೃಢವಾದ ಹೋರಾಟ ನಡೆಸಿಲ್ಲ. ಕೇಂದ್ರ ಸರಕಾರ ಶಿಫಾರಸು ಅಂಗೀಕರಿಸದಿದ್ದರೆ ಶಾಸಕರು, ವಿಧಾನಪರಿಷತ್ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಘೋಷಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಆದರೆ, ಪ್ರಧಾನಿ ಮನಮೋಹನ್ ಸಿಂಗ್ ಅವರೇ ರಾಜ್ಯಪಾಲರ ಶಿಫಾರಸನ್ನು ತಿರಸ್ಕರಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷವೇ ರಾಜ್ಯದ ಜನರಿಗೆ ಉತ್ತರ ಕೊಡಬೇಕು ಎಂದರು.











Click it and Unblock the Notifications