ಮಗನ ಶಿಕ್ಷಣಕ್ಕೆ ಹಣ ಹೊಂದಿಸಲಾಗದೆ ಅಪ್ಪ ನೇಣಿಗೆ ಶರಣು
ಮಂಗಳೂರು,
ಮೇ 24: ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯ ಅಸಿಸ್ಟೆಂಟ್ ಕಮೀಷನರ್ ಎಸ್. ವಿ. ರಂಗನಾಥ್ ರಾವ್ (59) ಅವರು ಇಲ್ಲಿನ ಹೋಟೆಲೊಂದರಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. id="toptextpromo">ಮಗನ
ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲಾಗದೆ, ಅಸಹಾಯಕ ಸ್ಥಿತಿಗೆ ತಲುಪಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಡೆತ್ ನೋಟ್ ಬರೆದಿಟ್ಟು ರಂಗನಾಥ್ ಇಹಲೋಕದ ವ್ಯವಹಾರ ಮುಗಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮೂಲತಃ
ಬೆಂಗಳೂರಿನವರಾದ ರಂಗನಾಥ್ ಮೇ 16ರಂದು ಹೋಟೆಲ್ ರೂಮನ್ನು ಬಾಡಿಗೆಗೆ ಪಡೆದಿದ್ದರು. ಮೇ 23ರಂದು ಹೋಟೆಲ್ ಸಿಬ್ಬಂದಿಗೆ ಈ ಕೊಠಡಿಯಿಂದ ಗಬ್ಬುನಾಥ ಬಡಿಯತೊಡಗಿತು. ವೆಂಟಿಲೇಟರ್ ಮೂಲಕ ಒಳಗೆ ಇಣಿಕಿದಾಗ ರಂಗನಾಥ್ ಶವ ಕಂಡುಬಂದಿದೆ. ಬಂದರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.











Click it and Unblock the Notifications