ಬೆಂಗಳೂರು ಇ-ಬುಕಿಂಗ್ ವೇಶ್ಯಾವಾಟಿಕೆ: ಯುವತಿಯರ ಸೆರೆ

ಅದರ ಮುಂದುವರಿದ ಭಾಗವಾಗಿ ಇ-ಬುಕಿಂಗ್ ವೇಶ್ಯಾವಾಟಿಕೆ ನಡೆಸುತ್ತಿದ್ದ ತಂಡವೊಂದು ಬೆಂಗಳೂರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದೆ. ಈ ತಂಡವು ಇ-ಬುಕಿಂಗ್ ಮೂಲಕ ಗ್ರಾಹಕರನ್ನು ಸೆಳೆದು ತಾರಾ ಹೋಟೆಲ್‌ಗಳಲ್ಲಿ ಕೊಠಡಿ ವ್ಯವಸ್ಥೆ ಮಾಡಿ ವೇಶ್ಯಾವಾಟಿಕೆ ಪ್ಯಾಕೇಜ್ ನಡೆಸುತ್ತಿತ್ತು ಎಂದು ಪೊಲೀಸರು ಇಳಿಸಿದ್ದಾರೆ.
ಬೆಂಗಳೂರು ಹೈಟೆಕ್ ವೇಶ್ಯಾವಾಟಿಕೆಯ ಸ್ವರ್ಗವಾಗಿದ್ದು, ದೆಹಲಿ, ಪುಣೆ, ಮುಂಬೈ, ಕೋಲ್ಕತ್ತಾದ ನೂರಾರು ಯುವತಿಯರು ಇಲ್ಲಿ ಬೀಡುಬಿಟ್ಟಿರುವುದು. ಬೇರೆ ಬೇರೆ ರಾಜ್ಯಗಳಲ್ಲಿ ಬುಕಿಂಗ್ ವ್ಯವಸ್ಥೆ ಇರುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ.
ನಗರವೊಂದರಲ್ಲೇ ಪ್ರತಿದಿನ ಕೋಟ್ಯಂತರ ರೂ. ವೇಶ್ಯವಾಟಿಕೆ ದಂಧೆ ನಡೆಯುತ್ತಿದ್ದು ಇದಕ್ಕಾಗಿಯೇ 'ಸೆಕ್ಸ್ ಟೂರಿಸಂ'ನ ಹೆಸರಿನಲ್ಲಿ ಪ್ರತ್ಯೇಕ ವ್ಯವಸ್ಥೆ ಹುಟ್ಟಿಕೊಂಡಿರುವುದೂ ಬೆಳಕಿಗೆ ಬಂದಿದೆ. 'ಬೆಂಗಳೂರು ಎಸ್ಕಾರ್ಟ್ಸ್ ವೆಬ್‌ಸೈಟ್' ಮೂಲಕ ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಈ ತಂಡ ವೇಶ್ಯಾವಟಿಕೆ ವ್ಯವಹಾರ ನಡೆಸುತ್ತಿತ್ತು.
ಬ್ರಿಗೇಡ್ ರಸ್ತೆಯ ಆಸ್ಕಾರ್ಟ್ ಹೋಟೆಲ್ ಮತ್ತು ಶೇಷಾದ್ರಿಪುರಂನಲ್ಲಿರುವ 'ದಿ ಗ್ರಾಂಡ್ ಮೆರಿಡಿಯನ್' ಹೋಟೆಲ್‌ಗಳ ಮೇಲೆ ದಾಳಿ ನಡೆಸಿದಾಗ ಇ-ಬುಕಿಂಗ್ ಜಾಲ ಸಿಕ್ಕಿ ಹಾಕಿಕೊಂಡಿದೆ. ಆಸ್ಕಾರ್ಟ್ ಹೋಟೆಲ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ದೆಹಲಿಯ ಮಾಹಿ ಬೆಸೋಯ (22), ಪುಣೆಯ ಸೋನಿಯಾ ಕಾಂಬ್ಳೆ (21) ಹಾಗೂ ವೇಶ್ಯಾವಾಟಿಕೆಗೆ ಸಹಕರಿಸುತ್ತಿದ್ದ ಹೋಟೆಲ್‌ನ ಸ್ವಾಗತಕಾರಿಣಿ ಮೇರಿ ಆಗ್ನೇಸ್ (37) ಸೆರೆ ಸಿಕ್ಕಿದ್ದರೆ, ದಿ ಗ್ರಾಂಡ್ ಮೆರಿಡಿಯನ್ ಹೋಟೆಲ್‌ನ ಮೇಲೆ ದಾಳಿ ನಡೆಸಿದಾಗ ಮುಂಬೈನ ಸಾನಿಯಾ ಅನ್ಸಾರಿ (22) ಎಂಬಾಕೆಯನ್ನು ಬಂಧಿಸಲಾಗಿದೆ.
ಸಾನಿಯಾ ಅನ್ಸಾರಿ 8 ದಿನಗಳಿಂದ ಇದೇ ಹೋಟೆಲ್‌ನಲ್ಲಿ ತಂಗಿದ್ದು ದಿನಕ್ಕೆ 30 ಸಾವಿರ ರೂ. ನಂತೆ 1.80 ಲಕ್ಷ ರೂ. ಗಳಿಸಿದ್ದು ಆ ಹಣವನ್ನು ಮುಂಬೈನಲ್ಲಿದ್ದ ತನ್ನ ಬ್ಯಾಂಕ್ ಖಾತೆಗೆ ಇಲ್ಲಿಂದಲೇ ವರ್ಗಾವಣೆ ಮಾಡಿಕೊಂಡಿದ್ದಳು. ಆದರೆ, ಇವರು ಇಲ್ಲಿ ಬಂದು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಲು ಪ್ರಮುಖ ಪಾತ್ರ ವಹಿಸಿದ್ದ ರಾಜೇಶ್ ಮತ್ತು ಕುಮಾರ್ ಅಲಿಯಾಸ್ ಮೈಕೇಲ್ ತಲೆಮರೆಸಿಕೊಂಡಿದ್ದಾರೆ. ಅಶೋಕನಗರ ಮತ್ತು ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಬಗ್ಗೆ ಪ್ರಕರಣಗಳು ದಾಖಲಾಗಿವೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications