ಹೆಚ್ಚು ಜನಪ್ರಿಯವಾಗುತ್ತಿರುವ 3 ಜಿ ಮೊಬೈಲ್ ಸೇವೆ

30 ಲಕ್ಷ ಚಂದಾದಾರೊಂದಿಗೆ ಭಾರ್ತಿ ಏರ್ ಟೆಲ್ ಕಂಪನಿ ಸೇವೆ ಒದಗಿಸುತ್ತಿರುವ ಕಂಪನಿಗಳಲ್ಲಿ ಅಗ್ರಸ್ಥಾನದಲ್ಲಿದೆ. ಟಾಟಾ ಡೊಕೊಮೊ 15 ಲಕ್ಷ ಚಂದಾದಾರರನ್ನು ಹೊಂದಿದೆ. ಬಿಎಸ್ಎನ್ಎಲ್, ಐಡಿಯಾ ಸೆಲ್ಯುಲಾರ್ ಮತ್ತು ವೊಡಾಫೋನ್ ತಲಾ 10 ಲಕ್ಷ ಗ್ರಾಹಕರನ್ನು ಹೊಂದಿವೆ. ಈ ಮಧ್ಯೆ, ಸೇವಾ ಕಂಪನಿಗಳು 2014ರ ವೇಳೆಗೆ 10 ಕೋಟಿ 3 ಜಿ ಗ್ರಾಹಕರನ್ನು ಹೊಂದುವ ಗುರಿ ಹಾಕಿಕೊಂಡಿವೆ.
3ಜಿ ಮೊಬೈಲ್ ಫೋನ್ ಸೇವೆ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದು ಸಾಕಷ್ಟು ಸುಧಾರಿಸಬೇಕಿದೆ. ಆದರೂ ಜನ ಈ ಸೇವೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇದರಿಂದ ದೇಶದಲ್ಲಿ ಅಂತರ್ಜಾಲ ಬಳಕೆಗೆ ಜನ ಹೆಚ್ಚು ಒತ್ತು ನೀಡುತ್ತಿರುವುದು ದೃಢಪಡುತ್ತದೆ.
ಸೆಕೆಂಡ್ ಗೆ 500-600 ಕೆಬಿ ಡೇಟಾ ವೇಗ ಹೊಂದಿದ್ದರೂ ದೇಶಾದ್ಯಂತ ಗ್ರಾಹಕರು ಇನ್ನೂ ಕೆಲವು ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ಕಾಲ್ ಡ್ರಾಪ್, ಅಸಮರ್ಪಕ ಸಂಪರ್ಕ ಮತ್ತು ಒಂದೇ ಗತಿಯ ವೇಗ ಕಾಯ್ದುಕೊಳ್ಳುವಲ್ಲಿ ಸೇವಾ ಕಂಪನಿಗಳು ವಿಫಲವಾಗುತ್ತಿವೆ. ಜತೆಗೆ ಭಾರಿ ದರ ವ್ಯತ್ಯಾಸವೂ ಗ್ರಾಹಕರಿಗೆ ತೊಡಕಾಗಿ ಪರಿಣಮಿಸಿದೆ. ರೋಮಿಂಗ್ ದರ ಹೆಚ್ಚಾಗಿರುವುದು ನುಂಗಲಾರದ ತುತ್ತಾಗಿದೆ.












Click it and Unblock the Notifications