ವಿಮಾನ ದುರಂತ ನಡೆದು ವರ್ಷವಾಯ್ತು.. ಪರಿಹಾರ ಎಲ್ಲಿದೆ?

Mangalore Air Crash
ಮಂಗಳೂರು, ಮೇ 22: ಇಲ್ಲಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಸರಿಯಾಗಿ ಒಂದು ವರ್ಷದ ಹಿಂದೆ ವಿಮಾನ ಪತನಗೊಂಡು ಸುಮಾರು 158 ಜನರನ್ನು ಬಲಿತೆಗೆದುಕೊಂಡಿತ್ತು. ಈ ಭೀಕರ ದುರಂತದಲ್ಲಿ ಮೃತರಾದವರ ಬಂಧುಗಳ ದುಃಖ ಇನ್ನೂ ಮಾಸಿಲ್ಲ. ಇದರೊಂದಿಗೆ ಅಪಘಾತದಲ್ಲಿ ಸತ್ತವರ ಕುಟುಂಬಗಳಿಗೆ ಪೂರ್ಣಪ್ರಮಾಣದ ಪರಿಹಾರ ಮಾತ್ರ ದೊರಕಿಲ್ಲ.

ದುರಂತದಲ್ಲಿ ಸಾವನ್ನಪ್ಪಿದ 158 ಮಂದಿಯಲ್ಲಿ ಈ ವರೆಗೆ 55 ಮಂದಿಯ ಪ್ರಕರಣಗಳು ಇತ್ಯರ್ಥವಾಗಿವೆ. ಪ್ರಧಾನಮಂತ್ರಿ ಪರಿಹಾರ ನಿಧಿ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸಂತ್ರಸ್ತರ ಕುಟುಂಬಕ್ಕೆ ಎರಡೆರಡು ಲಕ್ಷ ರು. ನೀಡಲಾಗಿದೆ. ಗಾಯಾಳುಗಳಿಗೆ 50 ಸಾವಿರ ರು. ವಿತರಣೆ ಮಾಡಲಾಗಿದೆ. ಕೆಲವೊಂದು ಕುಟುಂಬಗಳು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಪರಿಹಾರ ವಿಳಂಬವಾಗಿದೆ.

ಮಾಸದ ಗಾಯ: ಶಹೀನ್ ಎಂಬಾಕೆಗೆ ಇಂದು ಇಪ್ಪತ್ತನೆ ವೆಡ್ಡಿಂಗ್ ಅನಿವರ್ಸರಿ. ಆದರೆ ಆಕೆಯ ಪತಿ ರಫೀಕ್ ಆಹ್ಮದ್ ಕಳೆದ ವರ್ಷ ಬಜ್ಪೆ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದರು. ನಾಳೆ ನಿನ್ನ ಭೇಟಿಯಾಗುತ್ತೇನೆ ಎಂದು ಕೊನೆಯ ಬಾರಿ ಪತಿ ಕಳಿಸಿದ ಸಂದೇಶ ಈಗಲೂ ಈಕೆಯ ಮೊಬೈಲ್ ಇನ್ ಬಾಕ್ಸ್ ನಲ್ಲಿದೆ.

ಪಡೀಲ್ ನ ಅಚ್ಯುತ ಸುವರ್ಣ ಅವರು ತಮ್ಮ ತಲೆಮಾರನ್ನೇ ಕಳೆದುಕೊಂಡ ದುಃಖದಲ್ಲಿ ಕಾಲ ಕಳೆಯುತ್ತಿದ್ದಾರೆ. 42 ವಯಸ್ಸಿನ ಅವರ ಮಗ ಜಯರಾಮ ಕೋಟ್ಯಾನ್, ಸೊಸೆ ಚಿತ್ರ(39) ಮತ್ತು ಮೊಮ್ಮಗ ರಾಹುಲ್(4) ವಿಮಾನ ದುರಂತದಲ್ಲಿ ಮೃತಪಟ್ಟಿದ್ದರು. ತಂದೆತಾಯಿಯನ್ನು ನೋಡಲೆಂದು ರಜೆ ಹಾಕಿ ಬಂದ ಕುಟುಂಬವನ್ನು ನೆನಪಿಸುತ್ತ ಅಚ್ಯುತ ಕಣ್ಣೀರಾಗುತ್ತಾರೆ.

ಹೀಗೆ ಕಳೆದ ವರ್ಷ ವಿಮಾನ ದುರಂತದಲ್ಲಿ ಮೃತರಾದ 158 ಕುಟಂಬಗಳ ನೂರಾರು ಕಣ್ಣೀರ ಕಥೆಗಳು ನಮ್ಮೆದುರಿಗಿವೆ. ಆದರೆ ಪರಿಹಾರ ನೀಡುವಲ್ಲಿ ವಿಮಾನ ಸಂಸ್ಥೆ ಮೀನಮೇಷ ಎನಿಸುತ್ತಿದೆ. [ಓದಿ: ನಿದ್ದೆ ಮಾಡುತ್ತಿದ್ದ ಪೈಲೆಟ್ ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+