ಕಂಗೆಟ್ಟ ಕಾಂಗ್ರೆಸ್ ನಿಯೋಗದಿಂದ ಪ್ರಧಾನಿ ಭೇಟಿ
ನವದೆಹಲಿ,
ಮೇ. 21 : ಕರ್ನಾಟಕದಲ್ಲಿ ವಿಧಾನಸಭೆಯನ್ನು ಅಮಾನತಿನಲ್ಲಿಡಲು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಮಾಡಿರುವ ಶಿಫಾರಸಿಗೆ ಸಂಬಂಧಿಸಿದಂತೆ ಕೇಂದ್ರದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ಕರ್ನಾಟಕದ ಕಾಂಗ್ರೆಸ್ ನಾಯಕರ ನಿಯೋಗ ಶನಿವಾರ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಭೇಟಿ ಮಾಡಿದೆ. id="toptextpromo">ವಿರೋಧ
ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಧರಂಸಿಂಗ್, ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್, ಎಚ್ ವಿಶ್ವನಾಥ್, ಎಚ್ ಕೆ ಪಾಟೀಲ್, ಮೋಟಮ್ಮ ಮುಂತಾದವರಿದ್ದ ನಿಯೋಗ ಪ್ರಧಾನಿಯನ್ನು ಭೇಟಿ ಮಾಡಿ ರಾಜ್ಯಪಾಲರ ಶಿಫಾರಸನ್ನು ಆದಷ್ಟು ಬೇಗನೆ ಜಾರಿಗೆ ತರಬೇಕೆಂದು ಮನವಿ ಸಲ್ಲಿಸಿತು. ಈ ನಿಯೋಗ ಇಂದು ರಾತ್ರಿ 9.30ಕ್ಕೆ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರನ್ನು ಕೂಡ ಭೇಟಿಯಾಗಲಿದೆ. id='are-slot-1' class='oiad oi-axt oiadv'> id='top-searched-articles'>ನಿನ್ನೆ
ದೆಹಲಿಯಲ್ಲಿ ಯಪಿಎ ಸರಕಾರದ ರಾಷ್ಟ್ರೀಯ ವ್ಯವಹಾರಗಳ ಸಮಿತಿ ಸಭೆ ನಡೆಸಿತ್ತಾದರೂ ಕರ್ನಾಟಕದ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲೇ ಇಲ್ಲ. ಇದರಿಂದ ಕಂಗೆಟ್ಟಿರುವ ರಾಜ್ಯ ಕಾಂಗ್ರೆಸ್ ನೇರವಾಗಿ ಪ್ರಧಾನಿಯವರನ್ನೇ ಭೇಟಿಯಾಗಲು ನಿರ್ಧರಿಸಿದೆ. ಜೊತೆಗೆ, ಗೃಹ ಮಂತ್ರಾಲಯ ಕೂಡ ರಾಜ್ಯಪಾಲರ ಶಿಫಾರಸನ್ನು ತಿರಸ್ಕರಿಸಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.











Click it and Unblock the Notifications