2ಜಿ ಹಗರಣದ ಹೀರೋಯಿನ್ ಕನ್ನಿಮೋಳಿಗೆ ತಿಹಾರ್ ಮುದ್ದೆ

ನ್ಯಾಯಾಲಯದಲ್ಲಿ ಹಾಜರಿದ್ದ ಸಿಬಿಐ ಪೊಲೀಸರು ಇಬ್ಬರನ್ನೂ ತಕ್ಷಣ ಬಂಧಿಸಿದ್ದಾರೆ. ಇದೀಗ ತಿಹಾರ್ ಜೈಲಿನ ಕೊಠಡಿ 6 ಕನ್ನಿಮೋಳಿ ಆಗಮನಕ್ಕಾಗಿ ಕಾಯುತ್ತಿದೆ. ಅದಕ್ಕೂ ಮೊದಲು ಮುಂದಿನ ವಿಚಾರಣೆಗಾಗಿ ಶನಿವಾರ ಬೆಳಗ್ಗೆ 10 ಗಂಟೆಗೆ 43 ವರ್ಷದ ಕನ್ನಿಮೋಳಿ ಮತ್ತು ಶರದ್ ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಬೇಕು ಎಂದು ಕೋರ್ಟ್ ಸೂಚಿಸಿತು. [ಬಹುಮುಖ ಪ್ರತಿಭೆಯ ಕನ್ನಿಮೋಳಿ ವ್ಯಕ್ತಿಚಿತ್ರ]
ಕಿತ್ತಳೆ ಬಣ್ಣದ ಸಲ್ವಾರ್-ಖುರ್ತಾ ಧರಿಸಿದ್ದ ಕನ್ನಿಮೋಳಿ, ಪತಿ ಅರವಿಂದನ್ ಜತೆಗೂಡಿ ನ್ಯಾಯಾಲಯಕ್ಕೆ ಬೆಳಗ್ಗೆಯೇ ಆಗಮಿಸಿದ್ದರು. ಸಿಬಿಐ ಪಟಿಯಾಲಾ ಕೋರ್ಟ್ ನ್ಯಾಯಮೂರ್ತಿ ಒ.ಪಿ. ಸಾಯಿನಿ ಅವರು ಮಧ್ಯಾಹ್ನ 2.30ಕ್ಕೆ ಈ ಆದೇಶ ನೀಡಿದ್ದಾರೆ. ತೀರ್ಪು ನಿರೀಕ್ಷಿತ ಎಂದು ಕನ್ನಿಮೋಳಿ ಪ್ರತಿಕ್ರಿಯಿಸಿದ್ದಾರೆ.
2ಜಿ ತರಂಗಗುಚ್ಛ ಹಗರಣದಲ್ಲಿ ಎ ರಾಜಾ ಜತೆ ಭಾಗಿಯಾಗಿದ್ದಾರೆಂಬ ಆರೋಪ ಕನ್ನಿಮೋಳಿ ಅವರ ಮೇಲಿದೆ. 2ಜಿ ಹಗರಣದಲ್ಲಿ 1.7 ಲಕ್ಷ ಕೋಟಿ ರು. ಭ್ರಷ್ಟಾಚಾರ ನಡೆಸಿರುವ ಡಿಎಂಕೆ ಪಕ್ಷದ ಎ ರಾಜಾ ಅವರಿಂದ ಕನ್ನಿಮೋಳಿಗೆ 214 ಕೋಟಿ ರು. ಸಂದಾಯವಾಗಿದೆ ಎನ್ನಲಾಗಿದೆ. ಆ ಹಣ ಡಿಎಂಕೆ ಒಡೆತನದಲ್ಲಿರುವ ಕಲೈಗ್ನರ್ ಟಿವಿ ಚಾನಲ್ಲಿಗೆ ಸಂದಾಯವಾಗಿದೆ. ಆ ಚಾನೆಲ್ ನಲ್ಲಿ ಕನ್ನಿಮೋಳಿ ಶೇ.20ರಷ್ಟು ಶೇರು ಹೊಂದಿದ್ದಾರೆ.












Click it and Unblock the Notifications