ಮುಕೇಶ್ ಅಂಬಾನಿಯ ಬೃಹತ್ ಬಂಗಲೆಗೂ ವಾಸ್ತು ಕಾಟ

Vastu Problems
ಮುಂಬಯಿ, ಮೇ 19: ಕುಟುಂಬದ ವಾಸಕ್ಕಾಗಿ ವಿಶ್ವದಲ್ಲೇ ಅತಿ ದೊಡ್ಡ ಬಂಗಲೆಯನ್ನು ಕಟ್ಟಿದ ಉದ್ಯಮಿ ಮುಕೇಶ್ ಅಂಬಾನಿ ವಾಸ್ತು ದೋಷದಿಂದಾಗಿ ಆ ಮನೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ! ಕೊಲಾಬಾದಲ್ಲಿರುವ 27 ಮಹಡಿಗಳ ಆಂಟಿಲ್ಲಾ ಎಂಬ ಮನೆಗೂ ಮುಕೇಶ್ ಗ್ರಹಗತಿಗೂ ತಾಳೆಯಾಗುತ್ತಿಲ್ಲ. ಮುಕೇಶ್ ಜಾತಕ ಮತ್ತು ಅವರ ಹೊಸ ಮನೆಯ ವಾಸ್ತುವಿಗೂ ಹೊಂದಾಣಿಕೆಯಾಗುತ್ತಿಲ್ಲ.

ಸಾಮಾನ್ಯ ಜನರಿಗೆ ಚಿಕ್ಕದಾಗಿ ಹೊಸ ಮನೆ ಕಟ್ಟುವುದರೊಳಗೆ ಸಾಕು ಸಾಕಾಗಿರುತ್ತದೆ. ಇನ್ನು ಸ್ಥಳೀಯ ಆಡಳಿತದಿಂದ ಮನೆಗೆ ನೀರು, ವಿದ್ಯುತ್ ಸಂಪರ್ಕ ಪಡೆಯುವಷ್ಟರಲ್ಲಿ ಹೈರಾಣರಾಗಿರುತ್ತಾರೆ. ಅಂತಹುದರಲ್ಲಿ ಮುಕೇಶ್ ಸಾಹೇಬರಿಗೆ ಇಂತಹ ಯಾವುದೇ ಸಮಸ್ಯೆ ಕಾಡಿಲ್ಲ. 27 ಅಂತಸ್ತಿನ ಮನೆಯನ್ನು ನೋಡಿ ದೂರದಿಂದಲೇ ಆಡಳಿತ ಯಂತ್ರವು ಸಕಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಕಲ್ಪಿಸಿಕೊಟ್ಟಿದೆ. ಆದರೆ ವಾಸ್ತುವೊಂದೇ ಮುಕೇಶ್ ಗೆ ಕೈಕೊಡುತ್ತಿರುವುದು.

ಇನ್ನೂ ಆತಂಕದ ವಿಷಯವೆಂದರೆ ಮನೆಯೊಡತಿ ನೀತಾ ಮತ್ತು ಅವರ ಇಬ್ಬರು ಪುತ್ರರ ಜಾತಕವೂ ಹೊಸ ಮನೆಯ ವಾಸ್ತುವಿನೊಂದಿಗೆ ಹೊಂದಾಣಿಕೆಯಾಗುತ್ತಿಲ್ಲ. ಯಾವುದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಮುಕೇಶ್ ಕುಟುಂಬ ಸಿದ್ಧವಿಲ್ಲ. ನೀತಾ ಅಂತೂ ವಪರೀತ ಅನ್ನುವಷ್ಟು ಜ್ಯೋತಿಷ್ಯ, ವಾಸ್ತು ವಿಷಯಗಳಲ್ಲಿ ನಂಬಿಕೆ ಹೊಂದಿದ್ದಾರೆ. ಹಾಗಾಗಿ ಮೊದಲು ವಾಸ್ತು ದೋಷ ನಿವಾರಿಸಿಕೊಂಡು ಆಮೇಲೆ ಹೊಸ ಮನೆಯಲ್ಲಿ ಹಾಲು ಉಕ್ಕಿಸೋಣ ಎಂಬ ಸ್ಪಷ್ಟ ನಿರ್ಧಾರ ತೆಗೆದುಕೊಂಡಿದ್ದಾರೆ.

ಅಷ್ಟಕ್ಕೂ ಹೊಸ ಮನೆಯ ಬುಡಕ್ಕೆ ಕೈಹಾಕಿದಾಗ ಹೊರಬಂದ ಕುತೂಹಲಕರ ಸಂಗತಿಯೆಂದರೆ ಈ ನಿವೇಶನದಲ್ಲಿ ಮೊದಲು ವಕ್ಫ್ ಮಂಡಳಿಗೆ ಸೇರಿದ ಅನಾಥಾಶ್ರಮ ಇತ್ತಂತೆ. ನಿವೇಶನ ಕುರಿತು ನ್ಯಾಯಾಲಯದಲ್ಲಿ ಸಿವಿಲ್ ಕೇಸ್ ನಡೆಯುತ್ತಿದೆ. ಏನೇ ಆಗಲಿ ಮನೆಯವರ ಸೌಖ್ಯ, ನೆಮ್ಮದಿ ಮುಖ್ಯ ಎಂದಿರುವ ಮುಕೇಶ್, ವಾಸ್ತು ದೋಷ ಪರಿಹಾಕ್ಕಾಗಿ ಮನೆಯಲ್ಲಿ ಒಂದಷ್ಟು ಬದಲಾವಣೆ ಮಾಡಿಸುತ್ತಿದ್ದಾರೆ ಎಂಬುದು ತಾಜಾ ಸುದ್ದಿ.

ಶತಕೋಟಿ ಡಾಲರ್ ಮೌಲ್ಯದ ವಿಶ್ವದ ಏಕಮೇವ ಬಂಗಲೆಯ ವಿವರ ಹೀಗಿದೆ:
* ವಾಯುಸಂಚಾರ ಮಾಹಿತಿ ಕೇಂದ್ರ
* ಚಾವಣಿ ಮೇಲೆ ಮೂರು ಹೆಲಿಪ್ಯಾಡ್
* ಅರಬ್ಬಿ ಸಮುದ್ರದ ವಿಹಂಗಮ ನೋಟ
* 8 ರ ಭೂಕಂಪವನ್ನೂ ತಡೆದುಕೊಳ್ಳಬಲ್ಲದು
* 37,000 ಚ.ಮೀಟರ್ ವಾಸಯೋಗ್ಯ ಸ್ಥಳ
* ಸಿನಿಮಾ, ಕಾರ್ ಪಾರ್ಕಿಂಗ್ ಇವೆಲ್ಲ ಕಾಮನ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+