ಸ್ಪೀಕರ್ ವಜಾಗೆ ಗಡುವು: ಯಡಿಯೂರಪ್ಪ ಸೇಫ್ ?

ಈ ಸೂಚನೆಗೆ ತಪ್ಪಿ ನಡೆದರೆ ಭಾಜಪ ಸರಕಾರ ವಜಾ ಮಾಡುವುದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗುತ್ತದೆ ಎಂಬ ಅರ್ಥ ಕೊಡುವ ಸಂದೇಶವನ್ನು ರಾಜ್ಯಪಾಲ ಭಾರದ್ವಾಜ್ ಅವರಿಗೆ ರವಾನಿಸಲಾಗಿದೆ ಎಂದು ವಿಶ್ವಸನೀಯವಾಗಿ ಗೊತ್ತಾಗಿದೆ.
ಸಂಪುಟ ಸಭೆಯ ಅಜೆಂಡಾದಲ್ಲಿ ವಾಸ್ತವವಾಗಿ ಕರ್ನಾಟಕದ ಬಗ್ಗೆ ಯಾವುದೇ ವಿಷಯ ಚರ್ಚೆಗೆ ಪರಿಗಣಿಸಿರಲಿಲ್ಲ. ಆದರೆ ಸಂಪುಟ ಕೈಗೊಂಡಿರುವ ನಿರ್ಧಾರ ಅನೌಪಚಾರಿಕ ನೆಲೆಯಲ್ಲಿದೆ ಎನ್ನಲಾಗಿದೆ.
ಇದರೊಂದಿಗೆ ಚೆಂಡು ಈಗ ಯಡಿಯೂರಪ್ಪ ಅಂಗಳಕ್ಕೇ ಬಂದು ಬಿದ್ದಿದೆ. ತಮ್ಮ ಸರಕಾರದ ಅಳಿವು, ಉಳಿವಿನ ಪ್ರಶ್ನೆಯನ್ನು ಯಡಿಯೂರಪ್ಪ ಅವರಿಗೇ ಬಿಡಲಾಗಿದೆ. ಅಷ್ಟರಮಟ್ಟಿಗೆ ಯಡಿಯೂರಪ್ಪ ಸರಕಾರ ಸೇಫ್ ಆದಂತೆಯೂ ಆಗಿದೆ. ಬೋಪ್ಪಯ್ಯ ಅವರು ಸ್ಪೀಕರ್ ಸ್ಥಾನಕ್ಕೆ ಯಾವಾಗ ರಾಜೀನಾಮೆ ಕೊಡುತ್ತಾರೆ ಎನ್ನುವುದೇ ಈಗ ಉಳಿದಿರುವ ಪ್ರಶ್ನೆ.












Click it and Unblock the Notifications