ನಾನೂ ರಾಜೀನಾಮೆ ಕೊಡೊಲ್ಲ; ನೀವೂ ಕೊಡಬೇಡಿ

'ನನ್ನ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳಿಸಿಕೊಟ್ಟಿರುವೆ. ತೀರ್ಮಾನ ದೆಹಲಿ ಮಟ್ಟದಲ್ಲೇ ಆಗಲಿ ಎನ್ನುತ್ತಾರೋ ಅಥವಾ ಆಯ್ತು, ಅಧಿವೇಶನ ನಡೆಯಲಿ' ಎಂದು ಯಡಿಯೂರಪ್ಪ ಅವರ ಕೋರಿಕೆಗೆ ಮನ್ನಣೆ ನೀಡುತ್ತಾರೋ ಎಂಬುದು ಸದ್ಯದ ಕುತೂಹಲ.
ಗಮನಾರ್ಹವೆಂದರೆ, ಕೇವಲ ಹ್ಯಾಂಡ್ ಷೇಕ್ ಗೆ ಇವರ ಭೇಟಿ ಸೀಮಿತವಾಗಿರಲಿಲ್ಲ. ಸುಮಾರು ಕಾಲ ಇಬ್ಬರೂ ಪಿಸುಮಾತಿನಲ್ಲಿ ಮಾತನಾಡಿಕೊಂಡು, ನಗೆ ಚಟಾಕಿ ಹಾರಿಸಿಕೊಂಡು ಸಂತೋಷದಿಂದ ಇದ್ದರು. ಇದನ್ನು ಸಾಧ್ಯವಾಗಿಸಿದ್ದು ಕರ್ನಾಟಕ ಲೋಕಸೇವಾ ಆಯೋಗದ ಸಮಾರಂಭ. ಇದನ್ನು ಕಂಡು ಕರ್ನಾಟಕದ ಜನತೆ ಧನ್ಯತಾಭಾವ ಅನುಭವಿಸಿದ್ದಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಅಲ್ಲವೇ?
ಭಾರದ್ವಾಜ್ ಅವರು ಮತ್ತೊಂದು ಅಂಶವನ್ನು ಸ್ಪಷ್ಟಪಡಿಸಿದರು. ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ನೀಡುವುದಿಲ್ಲ. ನಾನು ಸಾಂವಿಧಾನಿಕ ಕರ್ತವ್ಯಗಳನ್ನು ನಿಭಾಯಿಸುವೆ. ಬಿಜೆಪಿ ಏನಾದರೂ ಹೇಳಿಕೊಳ್ಳಲಿ ಆದರೆ ನಾನು ನನ್ನ ವರದಿಗೆ ಬದ್ಧ ಎಂದು ಅವರು ಹೇಳಿದರು.
ಇದೇ ವೇಳೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋದ ರಾಜ್ಯಪಾಲ ಭಾರದ್ವಾಜ್, ಯಡಿಯೂರಪ್ಪ ಅವರನ್ನು ವಾಚಾಮಗೋಚರ ಹೊಗಳಿದರು. ಇದು ಯಾವುದರ ಸೂಚಿಯೋ ಸಂಜೆಯ ವೇಳೆಗೆ ಗೊತ್ತಾಗಲಿದೆ. ಯಡಿಯೂರಪ್ಪ ಅಂದರೆ ಏನು, ಅವರ ತಾಕತ್ತು ಎಂತಹುದು ಎಂಬುದುನ್ನು ಸ್ವತಃ ಭಾರದ್ವಾಜ್ ಅವರ ಮಾತುಗಳಲ್ಲೇ ಕೇಳಿ ತಿಳಿದುಕೊಳ್ಳಿ:
'ಇವರಿದ್ದಾರಲ್ಲ ನಾಡಿನ ಮುಖ್ಯಮಂತ್ರಿ, ಇವರು ಕಠಿಣ ಶ್ರಮಜೀವಿ. ಈತ ದಿನಕ್ಕೆ 10-15 ಗಂಟೆ ದುಡಿಯುತ್ತಾರೆ. ಇಂತಹ ಯಡಿಯೂರಪ್ಪ ಮತ್ತು ನಾನು ಉತ್ತಮ ಗೆಳೆಯರು. ರಾಜಕೀಯ ಇದ್ದದ್ದೇ. ನಾನು ನನ್ನ ಸಿದ್ಧಾಂತಗಳಿಗೆ ಹೋರಾಡುವೆ. ಅವರು ಅವರ ಸಿದ್ಧಾಂತಗಳಿಗಾಗಿ ಬಡಿದಾಡುತ್ತಾರೆ... '












Click it and Unblock the Notifications