ತ.ನಾಡಿನಲ್ಲಿ ಪುರಚ್ಚಿ ತಲೈವಿ ಭಾರಕ್ಕೆ ಡಿಎಂಕೆ ಪುಡಿಪುಡಿ

234 ಕ್ಷೇತ್ರಗಳಿಗೆ ತಮಿಳುನಾಡಿನಲ್ಲಿ ನಡೆದ ಚುನಾವಣೆಯಲ್ಲಿ 167 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದು, ಕಳೆದ ಚುನಾವಣೆಗಿಂತ 100ಕ್ಕೂ ಹೆಚ್ಚು ಕ್ಷೇತ್ರಗಳನ್ನು ತಮ್ಮ ಮಡಿಲಿಗೆ ಹಾಕಿಕೊಳ್ಳುವ ಹಾದಿಯಲ್ಲಿದ್ದಾರೆ. ಕರುಣಾನಿಧಿಯ ಅಧಃಪತನ ಹೆಚ್ಚೂಕಡಿಮೆ ಖಚಿತವಾಗಿದ್ದು, ತಮಿಳುನಾಡಿನಾದ್ಯಂತ ಎಐಎಡಿಎಂಕೆ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ : ಕರ್ನಾಟಕ ಉಪಚುನಾವಣೆ ಫಲಿತಾಂಶ
ಆಶ್ಚರ್ಯಕರ ಸಂಗತಿಯೆಂದರೆ, ಸೀಟುಗಳಿಗಾಗಿ ಯುಪಿಎನಲ್ಲಿ ಮೈತ್ರಿಹೊಂದಿರುವ ಡಿಎಂಕೆ ಜೊತೆ ಕ್ಯಾತೆ ತೆಗೆದಿದ್ದ ಕಾಂಗ್ರೆಸ್ ತಮಿಳುನಾಡಿನಲ್ಲಿ ಹೇಳಹೆಸರಿಲ್ಲದಂತಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋತರೆ ಕೇಂದ್ರದಲ್ಲಿಯೂ ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿಗೆ ಕತ್ತರಿ ಬೀಳುವ ನೀರೀಕ್ಷೆಯಿದೆ. ಸರಳ ಬಹುಮತ ಪಡೆಯಲು 117 ಕ್ಷೇತ್ರಗಳನ್ನು ಯಾವುದೇ ಪಕ್ಷ ಗೆಲ್ಲಬೇಕು. ಎಐಎಡಿಎಂಕೆ ಕನಿಷ್ಠ 140 ಸೀಟುಗಳನ್ನು ಗಳಿಸುವುದೆಂದು ನಿರೀಕ್ಷಿಸಲಾಗಿದೆ.
ಈ ನಡುವೆ, 2ಜಿ ತರಂಗಗುಚ್ಛ ಹಗರಣದಲ್ಲಿ 200 ಕೋಟಿ ರು. ತಿಂದಿರುವ ಆರೋಪ ಹೊತ್ತಿರುವ ಕರುಣಾನಿಧಿ ಮುದ್ದಿನ ಮಗಳು ಕನ್ನಿಮೋಳಿ ಸ್ಥಿತಿ ಮುಂದೇನಾಗಲಿದೆ ಎಂಬುದು. ಹಿಂದೆ ಅಧಿಕಾರ ಪಡೆದಿದ್ದಾಗ, ಕರುಣಾನಿಧಿಯನ್ನು ಜೈಲಿಗೆ ತಳ್ಳಿದ್ದ ಪುರುಚ್ಚಿ ತಲೈವಿ ಜಯಯಲಿತಾ ಅವರು ಕನ್ನಿಮೋಳಿಯನ್ನು ಜೈಲಿಗೆ ಗದುಮುವುದು ಹೆಚ್ಚೂ ಕಡಿಮೆ ಖಚಿತವೆ.











Click it and Unblock the Notifications