ಕಾಶ್ಮೀರಿ ಪಂಡಿತ್ ಮಹಿಳೆಗೆ ಕಣಿವೆಯಲ್ಲಿ ಚೊಚ್ಚಲ ಗೆಲುವು

ಮುಸ್ಲಿಮರೇ ಹೆಚ್ಚಾಗಿ ವಾಸಿಸುವ ಪುಸ್ಸಾನ್ ಗ್ರಾಮದಲ್ಲಿ 52 ವರ್ಷದ ಆಯಿಷಾ ಜೀ ಅವರು ಜಯಮಾಲೆ ಧರಿಸಿದ್ದಾರೆ. ಸರವ ಬೇಗಂ ಅವರನ್ನು ಆಯಿಷಾ 11 ಮತಗಳಿಂದ ಸೋಲಿಸಿ ಗ್ರಾಮದ ಸರಪಂಚ್ ಆಗಿದ್ದಾರೆ. ಗ್ರಾಮದಲ್ಲಿ ಒಟ್ಟು 1,000 ಜನರಿದ್ದು, ಅವರಲ್ಲಿ ಕೇವಲ 11 ಮಂದಿ ಕಾಶ್ಮೀರಿ ಪಂಡಿತರು ವಾಸವಾಗಿದ್ದಾರೆ.
ಕಾಶ್ಮೀರದಲ್ಲಿ ಭಯೋತ್ಪಾದಕರ ಕಾಟ ತೀವ್ರವಾಗಿ 1990 ರಿಂದೀಚೆಗೆ ಪಂಡಿತ್ ಸಮುದಾಯದವರು ಕಣಿವೆಯನ್ನು ತೊರೆಯುತ್ತಿರುವಾಗ (ಇವರಲ್ಲಿ ಬಹಳಷ್ಟು ಮಂದಿ ಬೆಂಗಳೂರಿಗೆ ವಲಸೆ ಬಂದಿದ್ದಾರೆ) ಆಯಿಷಾ ಅವರು ತಮ್ಮ ಪತಿ ರಾಧಾಕೃಷ್ಣನ್ ಮತ್ತು ಇಬ್ಬರು ಪುತ್ರರ ಜತೆ ಗ್ರಾಮದಲ್ಲಿಯೇ ನೆಲೆನಿಂತಿದ್ದಾರೆ.
ಮೂರು ತಿಂಗಳ ಗ್ರಾಮ ಪಂಚಾಯಿತಿ ಚುನಾವಣೆಗೆ ಕಣಿವೆಯಲ್ಲಿ ಭಾರಿ ಜನಸ್ಪಂದನೆ ದೊರೆತಿದೆ. ಇದು ಕಳೆದ ಬಾರಿಯ ವಿಧಾನಸಭೆ ಚುನಾವಣೆಗಿಂತ ಹೆಚ್ಚಾಗಿದೆ. ಈ ಹಿಂದೆ ಪಂಚಾಯಿತಿ ಚುನಾವಣೆಗಳು 2001ರಲ್ಲಿ ಜರುಗಿದ್ದವು. ಈ ಬಾರಿ 2,000 ಸರಪಂಚ್ ಗಳು ಮತ್ತು 15,000 ಪಂಚಾಯತ್ ಗಳು 15,000 ಕ್ಷೇತ್ರಗಳಿಂದ ಆಯ್ಕೆಯಾಗಲಿದ್ದಾರೆ. ಜೂನ್ 19ರಂದು ಚುನಾವಣೆ ಮುಗಿಯಲಿದೆ.












Click it and Unblock the Notifications