ಕೊಡಗಿನಲ್ಲಿ ಇನ್ನು ಎಲ್ಲೆಂದರಲ್ಲಿ ವೈನ್ ಮಾರಾಟವಿಲ್ಲ

Ban on wine making
ಮಡಿಕೇರಿ, ಮೇ 11 : ಕೊಡಗಿನಾದ್ಯಂತ ಅಂಗಡಿಗಳಲ್ಲಿ ಮಾರಾಟವಾಗುತ್ತಿರುವ ವೈನ್ ಇನ್ನು ಮುಂದೆ ಅಬಕಾರಿ ಇಲಾಖೆ ವ್ಯಾಪ್ತಿಗೊಳಪಡಲಿದ್ದು, ತಯಾರಿಸಲು ಹಾಗೂ ಮಾರಾಟ ಮಾಡಲು ಅಬಕಾರಿ ಲೈಸೆನ್ಸ್ ಪಡೆಯುವುದು ಅಗತ್ಯವಾಗಿದೆ.

ಇದುವರೆಗೆ ಜಿಲ್ಲೆಯ ಕೆಲವರು ತಮ್ಮ ಮನೆಯಲ್ಲಿಯೇ ವೈನ್ ತಯಾರಿಸಿ ಮಾರಾಟ ಮಾಡುತ್ತಿದ್ದರು. ಶುಂಠಿ, ದ್ರಾಕ್ಷಿ, ನೆಲ್ಲಿಕಾಯಿ ಮೊದಲಾದವುಗಳಿಂದ ತಯಾರಿಸಲ್ಪಟ್ಟ ವೈನ್‌ಗಳು ವಿವಿಧ ಬಣ್ಣಗಳಿಂದ ಆಕರ್ಷಿಸುತ್ತಿದ್ದವು. ದೂರದಿಂದ ಬರುವ ಪ್ರವಾಸಿಗರು ಇಲ್ಲಿ ಸಿಗುವ ವೈನ್‌ನ್ನು ಸೇವಿಸುತ್ತಿದ್ದುದಲ್ಲದೆ ತಮ್ಮೊಂದಿಗೆ ಕೊಂಡೊಯ್ಯುತ್ತಿದ್ದರು. ವೈನ್‌ಗೆ ಹೆಚ್ಚಿನ ಬೇಡಿಕೆಯಿದ್ದುದರಿಂದ ಹಲವರು ತಮ್ಮ ಮನೆಯಲ್ಲಿಯೇ ತಯಾರು ಮಾಡುವ ಮೂಲಕ ಜೀವನೋಪಾಯಕ್ಕೊಂದು ಮಾರ್ಗ ಕಂಡುಕೊಂಡಿದ್ದರು. ಆದರೆ ಇನ್ನು ಮುಂದೆ ಅಬಕಾರಿ ಇಲಾಖೆಯ ಲೈಸೆನ್ಸ್ ಪಡೆಯುವುದು ಅಗತ್ಯವಾಗಿರುವುದರಿಂದ ಆತಂಕ ಸೃಷ್ಟಿಯಾಗಿದೆ.

ಹಾಗೆನೋಡಿದರೆ ಕೊಡಗಿಗೂ ವೈನ್‌ಗೂ ತಲತಲಾಂತರದ ನಂಟಿದೆ. ಇಲ್ಲಿ ನಡೆಯುವ ಎಲ್ಲಾ ಸಮಾರಂಭಗಳಲ್ಲಿಯೂ ಮದ್ಯದೊಂದಿಗೆ ವೈನ್ ಬಳಕೆಯಾಗುತ್ತಿದೆ. ಹಿಂದಿನ ಕಾಲದಲ್ಲಿ ಕೆಲವರು ತಮ್ಮ ಬಳಕೆಗೆ ತಾವೇ ವೈನ್‌ನ್ನು ತಯಾರಿಸಿಕೊಳ್ಳುತ್ತಿದ್ದರು. ನಂತರದ ದಿನಗಳಲ್ಲಿ ಹೋಂಸ್ಟೇ ಸಂಸ್ಕೃತಿ ಜಿಲ್ಲೆಗೆ ಅಡಿಯಿಟ್ಟ ಬಳಿಕ ದೂರದ ಪ್ರವಾಸಿಗರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದರು. ಅವರಿಗೆ ಕೊಡಗಿನ ಸಾಂಪ್ರದಾಯಿಕ ತಿನಿಸುಗಳೊಂದಿಗೆ ವೈನ್‌ನ್ನು ಕೂಡ ನೀಡುವ ಪರಿಪಾಠ ಆರಂಭಿಸಲಾಯಿತು.

ಕೊಡಗಿನ ವೈನ್ ಪ್ರವಾಸಿಗರನ್ನು ಆಕರ್ಷಿಸಲು ಹೆಚ್ಚು ಸಮಯ ಬೇಕಾಗಲಿಲ್ಲ. ಯಾವಾಗ ವೈನ್‌ಗೆ ಬೇಡಿಕೆ ಹೆಚ್ಚಾಯಿತೋ ಅಂಗಡಿಗಳಲ್ಲಿ ವಿವಿಧ ಬಗೆಯ ವೈನ್‌ಗಳು ಮಾರಾಟಕ್ಕೆ ಬಂದವು. ಇದು ಹೀಗೆಯೇ ಮುಂದುವರೆದರೆ ಏನೂ ಆಗುತ್ತಿರಲಿಲ್ಲ. ಆದರೆ ಕೆಲವು ಕಿಡಿಗೇಡಿಗಳು ವೈನ್‌ಗೆ ಅಲ್ಕೋಹಾಲ್ ಇರುವ ರಾಸಾಯನಿಕವನ್ನು ಬೆರೆಸಿ ಮಾರಾಟ ಮಾಡತೊಡಗಿದ್ದರು. ಇದು ಅಬಕಾರಿ ಇಲಾಖೆಯ ಗಮನಕ್ಕೆ ಬಂದು ವೈನ್‌ನ್ನು ಪರೀಕ್ಷೆಗೊಳಪಡಿಸಿದಾಗ ಅಲ್ಕೋಹಾಲ್‌ನ ಅಂಶವಿರುವುದು ಪತ್ತೆಯಾಗಿದೆ. ಹೀಗಾಗಿ ಇನ್ನು ಮುಂದೆ ವೈನ್ ತಯಾರು ಮಾಡುವವರು ಅಬಕಾರಿ ಇಲಾಖೆಯ ಲೈಸೆನ್ಸ್ ಪಡೆಯುವುದು ಅಗತ್ಯವಾಗಿದೆ. ಯಾರೋ ಮಾಡಿದ ಕಿಡಿಗೇಡಿತನಕ್ಕೆ ಇದೀಗ ವೈನ್ ತಯಾರಿಸಿ ಹೊಟ್ಟೆಪಾಡು ಕಳೆಯುತ್ತಿದ್ದ ಕೆಲವರು ತೊಂದರೆಗೀಡಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+