ಅಣ್ಣ ಬೆಂಗಳೂರು ಮೈಸೂರಿಗೆ ಚಕ್ಕರ್, ಪಣಜಿಗೆ ಹಾಜರ್

Anna Hazare
ಗೋವಾ, ಮೇ 11: ಭ್ರಷ್ಟಾಚಾರ ತೊಲಗಿಸಿ ಆಂದೋಲನವನ್ನು ಗೋವಾದ ಪಣಜಿಯಿಂದ ಆರಂಭಿಸಲು ಗಾಂಧಿವಾದಿ ಅಣ್ಣಾ ಹಜಾರೆ ತೀರ್ಮಾನಿಸಿದ್ದಾರೆ. ಭ್ರಷ್ಟಾಚಾರ ವಿರುದ್ಧ ಜನಜಾಗೃತಿ ಮೂಡಿಸುವ ಸಾರ್ವಜನಿಕ ಸಭೆಯು ನಾಡಿದ್ದು ಶುಕ್ರವಾರ ಪಣಜಿಯಲ್ಲಿ ಆರಂಭವಾಗಲಿದೆ ಎಂದು "ಭ್ರಷ್ಟಾಚಾರದ ವಿರುದ್ಧ ಭಾರತ"(ಐಎಸಿ) ವಕ್ತಾರ ಸತೀಶ್ ಸೋನಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

"ಪಣಜಿಯ ಅಜಾದ್ ಮೈದಾನದಲ್ಲಿ ಶುಕ್ರವಾರ ಸಂಜೆ ಆರುಗಂಟೆಗೆ ಸಾರ್ವಜನಿಕ ಸಭೆಯಲ್ಲಿ ಅಣ್ಣಾ ಹಜಾರೆ ಮಾತನಾಡಲಿದ್ದಾರೆ. ಇಡೀ ಭಾರತದ ಭ್ರಷ್ಟತನದ ನಿರ್ಮೂಲನೆಗಾಗಿ ನಾವೆಲ್ಲ ಒಂದಾಗೋಣ. ಭ್ರಷ್ಟಾಚಾರ ವಿರೋಧಿಸುವ ಎಲ್ಲರೂ ಬನ್ನಿ ಪಾಲ್ಗೊಳ್ಳಿ" ಎಂದು ಸೋನಕ್ ಸಾರ್ವಜನಿಕರನ್ನು ಆಮಂತ್ರಿಸಿದ್ದಾರೆ. ಈ ಸಭೆಯಲ್ಲಿ ಕಿರಣ್ ಬೇಡಿ, ಸ್ವಾಮಿ ಅಗ್ನಿವೇಶ್, ಅರವಿಂದ್ ಕಜ್ರಿವಾಲ ಮತ್ತು ಮಾನಿಶ್ ಸಿಸೊಡಿಯಾ ಕೂಡ ಮಾತನಾಡಲಿದ್ದಾರೆ.

ಅಜಾದ್ ಮೈದಾನ ಮಾತ್ರವಲ್ಲದೇ ಇತರ ಕಡೆಗಳಲ್ಲೂ ಸಾರ್ವಜನಿಕ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಗೋವಾದ ಮಾರಾಗೊ ಎಂಬಲ್ಲಿ ಮೇ 13ರಂದು ಪೂರ್ವಾಹ್ನ ಹತ್ತೂವರೆ ಗೆಂಟೆಗೆ ಕೆಜ್ರಿವಾಲ್ ಸಾರ್ವಜನಿಕ ಜಾಗೃತಿ ಮೂಡಿಸಲಿದ್ದಾರೆ. ಅದೇ ದಿನ ಗೋವಾದ ಮಾರ್ಗಾವೊ ಎಂಬಲ್ಲಿ ಮಾನಿಶ್ ಸಿಸೋಡಿಯಾ ಮತ್ತು ಕಿರಣ ಬೇಡಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕರ್ತರು ಗೋವಾದ ಲೋಕಾಯುಕ್ತ ಮಸೂದೆ ಮತ್ತು ಜನ ಲೋಕಪಾಲ ಮಸೂದೆ ಕುರಿತು ಜನರಲ್ಲಿ ಅರಿವು ಮೂಡಿಸಲಿದ್ದಾರೆ.

ಬೆಂಗಳೂರಿಗೂ ಬನ್ನಿ ಅಣ್ಣಾ: ಈಗಾಗಲೇ ಅಣ್ಣಾ ಹಜಾರೆ ಅವರು ಬೆಂಗಳೂರು, ಮೈಸೂರಿಗೆ ಭೇಟಿ ನೀಡಬೇಕಿತ್ತು. ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವ ಅಣ್ಣಾ ಹಜಾರೆಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದರಿಂದ ಬೆಂಗಳೂರು ಭೇಟಿಯನ್ನು ಮುಂದೂಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+