ಈಜಲು ಬಂದ ಹುಡುಗರ ಕೈಗೆ ಸಿಕ್ಕ ಗೌತಮ ಬುದ್ಧ

ಭಾನುವಾರ ಬಾಗೂರು ಕೆರೆಯಲ್ಲಿ ಈಜಾಡುತ್ತಿದ್ದ ಕೆಲವು ಹುಡುಗರಿಗೆ ಬಾಗೂರು ಕೆರೆಯಲ್ಲಿ ಪಂಚಲೋಹದ ಪುತ್ತಳಿಯೊಂದು ದೊರಕಿದೆ ಎಂದು ಎಲೆಕ್ಟ್ರಾನಿಕ್ ಸಿಟಿ ಪೋಲಿಸರು ತಿಳಿಸಿದ್ದಾರೆ.
"ಇದರ ಕೆಲವು ಲಕ್ಷಣಗಳು ಬುದ್ಧನ ವಿಗ್ರಹದಂತಿದೆ. 45 ಕೆ.ಜಿ. ತೂಕ ಮತ್ತು 6 ಅಡಿ ಎತ್ತರದ ಈ ಪಂಚಲೋಹ ವಿಗ್ರಹವು ಹಲವು ಶತಮಾನಗಳಷ್ಟು ಹಳೆಯದಾಗಿರಬಹುದು" ಎಂದು ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು ಅಂದಾಜಿಸಿದ್ದಾರೆ.
"ಮುಖದ ಹೋಲಿಕೆಗಳು ಸಾಂಪ್ರದಾಯಿಕ ಬುದ್ಧನ ವಿಗ್ರಹದಂತಿದೆ. ಆದರೆ ಉಳಿದ ಭಾಗಗಳು ಬುದ್ಧನ ಪುತ್ತಳಿಗಿಂತ ವಿಭಿನ್ನವಾಗಿದೆ. ಈ ಪುತ್ತಳಿಯನ್ನು ಎಲ್ಲಿಂದ ಕದ್ದಿರಬಹುದೆಂದು ತನಿಖೆ ಮಾಡಲಾಗುವುದು" ಎಂದು ಅವರು ಹೇಳಿದ್ದಾರೆ. ಪುರಾತತ್ವ ವಿಭಾಗದ ಅಧಿಕಾರಿಗಳಲ್ಲಿ ಈ ವಿಗ್ರಹದ ಅಧ್ಯಯನಮಾಡಿ ತಿಳಿಸುವಂತೆ ಪೋಲಿಸರು ವಿನಂತಿಸಿದ್ದಾರೆ.












Click it and Unblock the Notifications