ವಿಪಕ್ಷದ ಅಕ್ರಮ ಗಣಿವೀರರ ಪಟ್ಟಿ ಶೀಘ್ರ ರಾಜ್ಯಪಾಲರ ಕೈಗೆ

ಇಲ್ಲಿನ ಪರಶುರಾಮ ಕ್ಷೇತ್ರದಲ್ಲಿ ಐದು ದಿನಗಳಿಂದ ನಡೆಯುತ್ತಿದ್ದ ಅತಿರುದ್ರ ಯಾಗದ ಅಂತಿಮ ದಿನದಂದು ಪೂಜೆ ನೆರವೇರಿಸಿದ ಬಳಿಕ ಯಡಿಯೂರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು. ತಮ್ಮ ಸರಕಾರ ಹೊಸದಾಗಿ ಒಂದೂ ಪರವಾನಗಿ ನೀಡಿಲ್ಲ. ಹಿಂದಿನ ಸರಕಾರಗಳ ಆಡಳಾತಾವಧಿಯಲ್ಲೇ ಎಲ್ಲ ಲೈಸನ್ಸ್ ನೀಡಿರುವುದು ಎಂದು ಪುನರುಚ್ಚರಿಸಿದರು.
'ಎಲ್ಲ ಅಭಿವೃದ್ಧಿಶೀಲ ರಾಷ್ಟ್ರಗಳು ಗಣಿಗಾರಿಕೆಯನ್ನು ನಿಷೇಧಿಸಿವೆ. ನಮ್ಮಲ್ಲಿನ ಗಣಿಸಂಪತ್ತನ್ನು ದೇಶೀಯವಾಗಿ ಮೌಲ್ಯಯುತವಾಗಿ ಬಳಸಿಕೊಳ್ಳುವುದನ್ನು ಉತ್ತೇಜಿಸಬೇಕು. ಇದನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರ ಗಮನಕ್ಕೆ ತಂದು ನಮ್ಮಲ್ಲೂ ಗಣಿಗಾರಿಕೆ ರಫ್ತಿಗೆ ನಿಷೇಧ ಹೇರುವಂತೆ ಕೋರಿದ್ದೆ. ಈಗ ಮತ್ತೊಮ್ಮೆ ಅವರನ್ನು ಇದೇ ಕೋರುವೆ' ಎಂದು ಅವರು ಹೇಳಿದರು.
ಸುಪ್ರೀಂಕೋರ್ಟ್ ನಿಂದ ನೇಮಕಗೊಂಡಿರುವ ವಿಶೇಷ ಸಮಿತಿಯು 19 ಕಂಪನಿಗಳು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿವೆ ಎಂದು ವರದಿ ನೀಡಿದೆ. ಆದರೆ ಇನ್ನೂ 90 ಕಂಪನಿಗಳು ಇಂತಹ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಬಗ್ಗೆ ನನ್ನಲ್ಲಿ ಮಾಹಿತಿ ಇದೆ. ಅದನ್ನು ರಾಜ್ಯಪಾಲರ ಗಮನಕ್ಕೆ ತರಲಾಗುವುದು ಎಂದು ಯಡಿಯೂರಪ್ಪ ಘೋಷಿಸಿದರು.












Click it and Unblock the Notifications