ಭಾರತದೊಳಕ್ಕೆ ನುಸುಳಲು ಪಾಕ್ ಉಗ್ರರ ಸಿದ್ಧತೆ

ಹೊಸದಿಲ್ಲಿ, ಮೇ 08 : ಭಾರತದೊಳಕ್ಕೆ ನುಸುಳಲು 100ಕ್ಕೂ ಹೆಚ್ಚು ಪಾಕ್ ಉಗ್ರರು ಗಡಿ ನಿಯಂತ್ರಣ ರೇಖೆಯಲ್ಲಿ ಹೊಂಚುಹಾಕುತ್ತಿದ್ದು, 700 ಮಂದಿ ನಾನಾ ಶಿಬಿರಗಳಲ್ಲಿ ತರಬೇತಿ ಸಜ್ಜಾಗುತ್ತಿದ್ದಾರೆ.

ಗೃಹ ಸಚಿವಾಲಯವು ಬೇಹುಗಾರಿಕೆ ಮೂಲಗಳನ್ನಾಧರಿಸಿ ಈ ಮಾಹಿತಿಯನ್ನು ನೀಡಿದ್ದು, ಯಾವುದೇ ಕ್ಷಣದಲ್ಲಿ ಜಮ್ಮು ಕಾಶ್ಮೀರದೊಳಕ್ಕೆ ನುಸುಳಲು ಉಗ್ರರು ಸನ್ನದ್ಧರಾಗಿದ್ದಾರೆ. ಪಾಕಿಸ್ತಾನಕ್ಕೆ ಅನೇಕ ಬಾರಿ ಈ ಬಗ್ಗೆ ದೂರಿದ್ದರೂ ಗಡಿಯಾಚೆಗಿನ ಭಯೋತ್ಪಾದನೆ ಜಾಲ ಇನ್ನೂ ಜೀವಂತವಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಅತ್ಯುಗ್ರ ಒಸಾಮಾ ಬಿನ್ ಲಾಡೆನ್ ಹತ್ಯಾನಂತರ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನದ ಅಧಿಕಾರಿಗಳು ಲಷ್ಕರೆ ತಯ್ಬಾ, ಹಿಜ್ ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ ನೂರಾರು ಉಗ್ರರನ್ನು ಭಾರತದೊಳಕ್ಕೆ ತಳ್ಳಲು ಸಂಚು ರೂಪಿಸುವ ಲಕ್ಷಣಗಳಿವೆ ಎಂದು ತಿಳಿದುಬಂದಿದೆ.

ಗಡಿ ವಾಸ್ತವ ರೇಖೆಯಲ್ಲಿ ಮೇ 5, ಏಪ್ರಿಲ್ 24 ಮತ್ತು ಏಪ್ರಿಲ್ 22ರಂದು ಗುಂಡಿನ ಚಕಮಕಿ ನಡೆದಿದೆ. ಉಗ್ರರ ಒಳನುಸುಳುವಿಕೆಗೆ ಅನುವು ಮಾಡಿಕೊಡಲು ಪಾಕ್ ಸೇನೆಯು ಭಾರತದ ಭದ್ರತಾ ಪಡೆಗಳ ಗಮನವನ್ನು ಈ ರೀತಿ ತನ್ನತ್ತ ಸೆಳೆಯುತ್ತದೆ. ಆದರೆ ಉಗ್ರರ ಇಂತಹ ಯಾವುದೇ ದುಸ್ಸಾಹಸವನ್ನು ಸದೆಬಡಿಯಲು ಭಾರತ ಸಜ್ಜಾಗಿದೆ ಎಂದು ಮೂಲಗ್ಳು ಸ್ಪಷ್ಟಪಡಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+