ಭಾನುವಾರ ಚೌಡಯ್ಯದಲ್ಲಿ ಸೀತಾ ಕಲ್ಯಾಣ ಹರಿಕಥೆ

ಅನಾದಿ ಕಾಲದ ಕಲೆಗಳಲ್ಲಿ ಒಂದಾದ ಕಥಾಕಾಲಕ್ಷೇಪ ಪ್ರಕಾರದಲ್ಲಿ ನೈಪುಣ್ಯತೆ ಪಡೆದಿರುವ ಚೆನ್ನೈನ ವಿಶಾಖಾ ಹರಿ ತಮ್ಮ ಸುಮಧುರ ಕಂಠದಿಂದ ಕೇಳುಗರನ್ನು 'ಸೀತಾ ಕಲ್ಯಾಣ'ದ ಕಥೆಯ ಮುಖಾಂತರ ರಾಮಾಯಣಕ್ಕೆ ಎಳೆದೊಯ್ಯಲಿದ್ದಾರೆ. ಸಮಾರಂಭ ನಡೆಯುತ್ತಿರುವುದು ಇದೇ ಭಾನುವಾರ, ಮೇ 8ರಂದು, ಮಲ್ಲೇಶ್ವರದ ವೈಯಾಲಿಕಾವಲ್ ನಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ. ಸಮಯ ಸಂಜೆ 6 ಗಂಟೆಗೆ. ನಾಲ್ಕು ಗಂಟೆ ಬಿಡುವು ಮಾಡಿಕೊಂಡು ಬನ್ನಿ.
ಆಕಾಶವಾಣಿಯ ಎ ಗ್ರೇಡ್ ಕಲಾವಿದೆಯಾಗಿರುವ ವಿಶಾಖಾ ಹರಿಯವರು ಹಿಂದೂ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಆಖ್ಯಾನಗಳನ್ನು ಅತ್ಯಂತ ಸುಶ್ರಾವ್ಯವಾಗಿ ಹೇಳುವುದರಲ್ಲಿ ಅಗ್ರಗಣ್ಯರು. ವಿಶಾಖಾ ಅವರು ತ್ಯಾಗರಾಜ ಪ್ರತಿಧ್ವನಿ ಮತ್ತು ಯುವ ಕಲಾ ಭಾರತಿ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳೂ ಭಾಜನರಾಗಿದ್ದಾರೆ.
ಟಿಕೆಟ್ಟುಗಳು ರು.300, 500, 1,000, 1,500 ಮತ್ತು 2,000ಗಳಲ್ಲಿ ಲಭ್ಯವಿದ್ದು, ಅಹ್ಮದ್ ಅಥವಾ ವಿಜಯ್ ಅವರನ್ನು 9986984878 / 9008877900 ಮೊಬೈಲ್ ನಂಬರುಗಳಲ್ಲಿ ಸಂಪರ್ಕಿಸಬಹುದಾಗಿದೆ. ಟಿಕೆಟ್ ಗಳನ್ನು ಆನ್ ಲೈನ್ ಮುಖಾಂತರ ಅಥವಾ ವಿಳಾಸ : ಬಜಿನ್ ಟೌನ್, ನಂ.35, 1ನೇ ಮಹಡಿ, ಮಿರೇಜ್ ಪಾಯಿಂಟ್, 80 ಅಡಿ ರಸ್ತೆ, ಕೋರಮಂಗಲ, ಬೆಂಗಳೂರು - 560 095ಗೆ ಹೋಗಿ ಖುದ್ದಾಗಿ ಪಡೆದುಕೊಳ್ಳಬಹುದಾಗಿದೆ.












Click it and Unblock the Notifications