ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕಿಲ್ ಒಸಾಮಾ' ಕಟ್ಟುಕತೆ ಎಂದ ಲಾಡೆನ್ ಪುಟ್ಟ ಮಗಳು

|
Google Oneindia Kannada News

Osama Bin Laden
ಇಸ್ಲಾಮಾಬಾದ್, ಮೇ 5: ಅಲ್ ಖೈದಾ ನಾಯಕ ಲಾಡೆನ್ ನ್ನು ಬಂಧಿಸಿ, ನಿರಾಯುಧನಾಗಿ ಮಾಡಿ ಶೂಟ್ ಮಾಡಲಾಗಿದೆ ಎಂದು ಲಾಡೆನ್ ನ 12 ವರ್ಷದ ಮಗಳೊಬ್ಬಳು ಅರೆಬಿಕ್ ಟೆಲಿವಿಷನೊಂದಕ್ಕೆ ತಿಳಿಸಿದ್ದಾಳೆ. ಇದರಿಂದಾಗಿ ಅಮೆರಿಕದ "ಕಿಲ್ ಒಸಾಮಾ" ಅಪರೇಷನ್ ಕಟ್ಟುಕತೆಯಾಗಿರಬಹುದೇ? ಇಡೀ ವಿಶ್ವದ ಜನತೆಯ ಕಿವಿಗೆ ಅಮೆರಿಕ ಹೂವು ಇಡುವ ಪ್ರಯತ್ನದಲ್ಲಿರುವುದೇ? ಕಿಲ್ ಒಸಾಮಾ, ಕಮಾಂಡೊ ಅಪರೇಷನ್ ಇತ್ಯಾದಿಗಳೆಲ್ಲ ಉತ್ತರ ಕುಮಾರನ ಪೌರುಷದ ಮಾತುಗಳಂತೆ ಭಾಸವಾಗುತ್ತಿದೆ.

ಲಾಡೆನ್ ಮಗಳ ಮಾತನ್ನು ಉಲ್ಲೇಖಿಸಿ ವರದಿ ಮಾಡಿದ್ದು ಇಸ್ಲಾಮಾಬಾದ್ ನ ಟೆಲಿವಿಷನ್ ಚಾನೆಲ್. ಅದರ ಪ್ರಕಾರ "ಲಾಡೆನ್ ನನ್ನು ಬಂಧಿಸಿ ನಂತರ ಕೊಲೆ ಮಾಡಲಾಯಿತು. ಇದನ್ನು ಆತನ 12 ವರ್ಷದ ಮಗಳು ಕಣ್ಣಾರೆ ಕಂಡಿದ್ದಾಳೆ" ಎಂದಿದೆ.

ಇಂಟರ್ ಸರ್ವಿಸ್ ಇಂಟಲಿಜೆನ್ಸ್(ಐಎಸ್ಐ) ಅಧಿಕಾರಿಯೊಬ್ಬರ ಪ್ರಕಾರ ಲಾಡೆನ್ ಪತ್ನಿ ಯೆಮಿನಿ ಮತ್ತು ಈ ಹುಡುಗಿಯನ್ನು ಬಂಧಿಸಲಾಗಿದೆ. ಅಮೆರಿಕವು ಲಾಡೆನ್ ಮನೆಗೆ ದಾಳಿ ಮಾಡಿದ ಸಂದರ್ಭದಲ್ಲಿ ಆತನ ಮನೆಯಲ್ಲಿ ಸಿಕ್ಕ 12ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳನ್ನು ಕಂಬಿಗಳ ಹಿಂದೆ ಕೂರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಆಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ನನ್ನು ಅಮೆರಿಕಾ ಕಮಾಂಡೊ ಅಪರೇಷನ್ ಮೂಲಕ ಕೊಲೆ ಮಾಡಿಲ್ಲ. ಆತ ನಿರಾಯುಧನಾಗಿದ್ದ ಸಂದರ್ಭದಲ್ಲಿ, ಬಂಧಿಸಿ ಗುಂಡಿಟ್ಟು ಕೊಲ್ಲಲಾಗಿದೆ. ಇದನ್ನೆಲ್ಲ ಲಾಡೆನ್ ಪುತ್ರಿ 12 ವರ್ಷದ ಬಾಲಕಿ ಬಹಿರಂಗಪಡಿಸಿದ್ದಾಳೆ. ಒಸಾಮಾನನ್ನು ಕೊಂದು ಆಮೇಲೆ ಈ ಕಿಲ್ ಒಸಾಮಾ ನಾಟಕ ನಡೆಸಲಾಗಿದೆ ಎಂಬ ಆ ಅರೆಬಿಕ್ ಚಾನಲ್ ವರದಿ ಹೊಸ ವದಂತಿ ಹುಟ್ಟುಹಾಕಿದೆ.

English summary
"Osama bin Laden was unarmed at the time of his killing and his 12-year-old daughter saw her father being shot dead" an Arabic TV station reported. Now Osama bin Laden death remained unclear.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X