ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿನ್ ಲಾಡೆನ್ ಮಟಾಷ್, ಅಮೆರಿಕದಲ್ಲಿ ವಿಜಯೋತ್ಸವ

By Prasad
|
Google Oneindia Kannada News

ವಾಷಿಂಗ್ಟನ್, ಮೇ. 02 : ಜಗತ್ತಿನ ಶಾಂತಿಗೆ ಕಂಟಕಪ್ರಾಯವಾಗಿದ್ದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಸಾವಿಗೀಡಾಗಿದ್ದಾನೆ. ಒಸಾಮಾ ಬಿನ್ ಲಾಡೆನ್ ನ ಮೃತದೇಹ ತಮ್ಮ ಸುಪರ್ದಿಯಲ್ಲಿದೆ ಎಂದು ಅಮೆರಿಕ ಹೇಳಿಕೆ ನೀಡಿದೆ.

2001ರ ಸೆಪ್ಟೆಂಬರ್ 11ರಂದು ಅಮೆರಿಕಾದ ವಿಶ್ವ ವ್ಯಾಪಾರ ಕೇಂದ್ರ ಮತ್ತು ಪೆಂಟಗಾನ್ ಮೇಲೆ ದಾಳಿ ಮಾಡಿಸಿ ಅಮೆರಿಕಾದ ಸಾರ್ವಭೌಮತ್ವಕ್ಕೆ ಭಾರೀ ಪೆಟ್ಟು ನೀಡಿದ್ದ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿ ಅಮೆರಿಕಾದ ಸೇನೆಯಿಂದ ಹತನಾಗಿದ್ದಾನೆ ಎಂದು ತಿಳಿದುಬಂದಿದೆ.

ಒಸಾಮಾ ಬಿನ್ ಲಾಡೆನ್ ಒಂದು ವೇಳೆ ಅಮೆರಿಕದವರ ಕೈಯಲ್ಲಿ ಹತನಾದರೆ ಅಥವಾ ಸಿಕ್ಕಿಬಿದ್ದರೆ ಅಣು ಬಾಂಬನ್ನು ಉಡಾಯಿಸಲಾಗುವುದು ಎಂದು ಅಲ್ ಖೈದಾ ಬೆದರಿಕೆ ಒಡ್ಡಿತ್ತು. ಯುರೋಪ್ ನಲ್ಲಿ ಅಣು ಬಾಂಬನ್ನು ಹುದುಗಿಡಲಾಗಿದ್ದು, ಒಸಾಮಾ ಸಿಕ್ಕಿಬಿದ್ದರೆ ಸರ್ವನಾಶವಾಗುವುದು ಖಂಡಿತ ಎಂಬ ಎಚ್ಚರಿಕೆ ನೀಡಿತ್ತು.

ಮುಯ್ಯಿಗೆ ಮುಯ್ಯಿ : ಸುದ್ದಿ ಹರಡುತ್ತಿದ್ದಂತೆಯೇ ಜನತೆ ಶ್ವೇತಭವನದತ್ತ ಧಾವಿಸಿ ಬರಲು ಆರಂಭಿಸಿದರು. ಅಮೆರಿಕಾದ ಕಾಲಮಾನ ಭಾನುವಾರ ರಾತ್ರಿ ಅಧ್ಯಕ್ಷ ಬರಾಕ್ ಒಬಾಮ ಪ್ರಪಂಚವನ್ನು ಉದ್ದೇಶಿಸಿ 15 ನಿವಿಷಗಳ ಭಾಷಣ ಮಾಡಿದರು. ಒಬಾಮ ಸಾವನ್ನು ಖಚಿತಪಡಿಸುವ ಮತ್ತು ಹತ್ತು ವರ್ಷಗಳಷ್ಟು ದೀರ್ಘ ಕಾಲ ಕಾದಿದ್ದು, ಹೊಂಚುಹಾಕಿ ಕೊನೆಗೂ ಅವನನ್ನು ಮುಗಿಸಿದ ವಿವರಗಳನ್ನು ಬಿಚ್ಚಿಟ್ಟರು. ಅವರ ಭಾಷಣದಲ್ಲಿ ಸೇಡು ತೀರಿಸಿಕೊಂಡ ಭಾವ ಮಡುಗಟ್ಟಿತ್ತು. ಧೈರ್ಯ ಮತ್ತು ದೇಶಪ್ರೇಮದಿಂದ ಹೋರಾಡಿ ಖಳನಾಯಕನನ್ನು ಹೊಸಕಿಹಾಕಿದ ಅಮೆರಿಕದ ಪಡೆಗಳನ್ನು ಅವರು ಮನಸಾರೆ ಅಭಿನಂದಿಸಿದರು.

English summary
Most wanted terrorist Osama Bin Laden has been killed. He is said to be in the pocession of US and US president Barack Obama is likely to announce on May 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X