ಬಿದರಿ ಎತ್ತಂಗಡಿ; ಮಿರ್ಜಿ ನೂತನ ಪೊಲೀಸ್ ಆಯುಕ್ತ

ಕಳೆದ ವಾರವೂ ಸರಕಾರ ಪೊಲೀಸ್ ವಲಯದಲ್ಲಿ ಒಂದಷ್ಟು ವರ್ಗಾವಣೆಗಳನ್ನು ಮಾಡಿದೆ. ಅವು ಹೀಗಿವೆ: ಡಾ. ಎಸ್. ಟಿ. ರಮೇಶ್, ಐಪಿಎಸ್, ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದ ಡಿಜಿಪಿಯಾಗುವುದರ ಜತೆಗೆ ಡಿಜಿ -ಐಜಿಪಿಯಾಗಿ ಸೇವೆ ಮುಂದುವರಿಸಲಿದ್ದಾರೆ.
ಇನ್ನು, ಲೋಕಾಯುಕ್ತದಲ್ಲಿದ್ದ ರೂಪ್ ಕುಮಾರ್ ದತ್ತಾ ಅವರನ್ನು ಕಾನೂನು ಸುವ್ಯಸವ್ಥೆ ಎಡಿಜಿಪಿಯಾಗಿ ಅತ್ಯಂತ ಅನಿರೀಕ್ಷಿತ ರೀತಿಯಲ್ಲಿ ಎತ್ತಂಗಡಿ ಮಾಡಲಾಗಿದೆ.
ಕಾನೂನು ಸುವ್ಯವಸ್ಥೆ ಎಡಿಜಿಪಿಯಾಗಿದ್ದ ಎ.ಆರ್. ಇನ್ ಫ್ಯಾಂಟ್ ಅವರನ್ನು ಡಿಜಿಪಿಯಾಗಿ ಮೇಲ್ದರ್ಜೆಗೆ ಉನ್ನತೀಕರಿಸಲಾಗಿದೆ. ಸದ್ಯಕ್ಕೆ ಅವರು ಪೊಲೀಸ್ ತರಬೇತಿ ಡಿಜಿಪಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಹರ್ಷವರ್ಧನ ರಾಜು ಅವರು ಪೊಲೀಸ್ ನೇಮಕಾತಿ ಮತ್ತು ತರಬೇತಿ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆಗೊಂಡಿದ್ದಾರೆ.
ಭಾಸ್ಕರ್ ರಾವ್ ಅವರು ಭಯೋತ್ಪದಾನೆ ವಿರುದ್ದ ಕಾರ್ಯಾಚರಣೆ ಘಟಕದ ಐಜಿಪಿಯಾಗಿ ವರ್ಗಾವಣೆಯಾಗಿದ್ದಾರೆ. ಕೆಎಸ್ಆರ್ ಚರಣ್ ರೆಡ್ಡಿ ಅವರು ಆಂತರಿಕ ಭದ್ರತೆ ವಿಭಾಗದ ಐಜಿಪಿಯಾಗಿದ್ದಾರೆ.












Click it and Unblock the Notifications