ಅಣ್ಣಾ ಹಜಾರೆ ಬೆಂಗಳೂರು ಭೇಟಿ ಮುಂದೂಡಿಕೆ
ಬೆಂಗಳೂರು,
ಮೇ.1: ಭ್ರಷ್ಟಾಚಾರದ ವಿರುದ್ಧ ಸಮಯ ಸಾರಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಬೆಂಗಳೂರು ಭೇಟಿ ಬಹುತೇಕ ರದ್ದಾಗುವ ಸಾಧ್ಯತೆಗಳಿವೆ. ಅವರು ಮೇ.6ರಂದು ಬೆಂಗಳೂರಿಗೆ ಭೇಟಿ ನೀಡಲು ಯೋಜಿಸಿದ್ದರು. ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವ ಅವರನ್ನು ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿರುವುದೇ ಇದಕ್ಕೆ ಕಾರಣ. id="toptextpromo">ಅಣ್ಣಾ
ಅವರ ಬೆಂಗಳೂರಿ ಭೇಟಿಯನ್ನು ಮೇ ತಿಂಗಳ ಮಧ್ಯ ಭಾಗಕ್ಕೆ ಮುಂದೂಡಲಾಗಿದೆ. ಅಣ್ಣಾ ಅವರ ಭ್ರಷ್ಟಾಚಾರದ ವಿರುದ್ಧದ ಸಮರ ಮಾತ್ರ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು "ಭ್ರಷ್ಟಾಚಾರದ ವಿರುದ್ಧ ಭಾರತ"(ಐಎಸಿ) ಕಾರ್ಯಕರ್ತರು ಸ್ಪಷ್ಟಪಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'> ಕಾರ್ಯಕರ್ತರ ಉತ್ಸಾಹವನ್ನು ಹೆಚ್ಚಿಸಲು ಬೆಂಗಳೂರಿನಲ್ಲಿ ಐಎಸಿ ಇಂದು ನಾಲ್ಕು ಕಡೆ ಮೋಂಬತ್ತಿ ಅಭಿಯಾನವನ್ನು ಹಮ್ಮಿಕೊಂಡಿದೆ. ಬೆಳಗ್ಗೆ 8ರಿಂದ ರಾತ್ರಿ 9 ಗಂಟೆ ತನಕ ಈ ಈ ಮೌನ ಮೆರವಣಿಗೆ ನಡೆಯಲಿದೆ. ಪ್ರತಿ ಭಾಗದಲ್ಲಿ 100ರಿಂದ 150 ಮಂದಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಐಎಸಿ ಸದಸ್ಯ ಅಜಿತ್ ತಿಳಿಸಿದ್ದಾರೆ.











Click it and Unblock the Notifications