ಟೋಲ್ ಸಂಗ್ರಹಕ್ಕೆ ಅನುಮತಿ ನೀಡುವುದಿಲ್ಲ: ಸಿ. ಎಂ. ಉದಾಸಿ

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮತ್ತು ಹೈದರಬಾದ್-ಬೆಂಗಳೂರು ಟಾಕ್ಸಿ ಚಾಲಕರ ಸಂಘಕಾನೂನುಬಾಹಿರ ಟೋಲ್ ಸಂಗ್ರಹ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿತ್ತು. ಟೋಲ್ ಸಂಗ್ರಹ ಕೇಂದ್ರಗಳಲ್ಲಿದ್ದ ಪೀಠೋಪಕರಣಗಳನ್ನು ಪ್ರತಿಭಟನಾಕಾರರು ಧ್ವಂಸಗೊಳಿಸಿ ಗಣಕೀಕೃತ ಪ್ರವೇಶದ್ವಾರಗಳನ್ನು ಪುಡಿಮಾಡಿದ್ದರು.. ಟೋಲ್ ಕೇಂದ್ರಗಳ ಮೇಲೆ ಕಲ್ಲು ತೂರಾಟ ನಡೆಸಿ ಕಿಟಕಿ, ಬಾಗಿಲುಗಳ ಗಾಜನ್ನು ಒಡೆದು ಹಾಕಿ ಪ್ರತಿಭಟನಾಕಾರರು ರೋಷ ವ್ಯಕ್ತಪಡಿಸಿದ್ದರು. ರಾಜ್ಯ ಸಾರಿಗೆ ಸಚಿವ ಆರ್ ಅಶೋಕ ಅವರ ಸೂಚನೆಯ ಮೇರೆಗೆ ಟೋಲ್ ಸಂಗ್ರಹ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಲಾಗಿತ್ತು.
ಸೋಮವಾರದಿಂದ ಟೋಲ್ ಸಂಗ್ರಹಿಸುವುದಾಗಿ ನವಯುಗ ದೇವನಹಳ್ಳಿ ಟೋಲ್ ವೇ ಪ್ರೈವೇಟ್ ಲಿಮಿಟೆಡ್(ಎನ್ಡಿಟಿಪಿಎಲ್) ಪತ್ರಿಕೆಗಳಲ್ಲಿ ಜಾಹೀರಾತು ನೀಡಿತ್ತು. ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಸಂಗ್ರಹ ಮತ್ತು ನಿಗದಿ ಪಡಿಸಿದ ದರಕ್ಕೆ ಅನುಮತಿ ನೀಡಿರುವುದಾಗಿ ಸೋಮವಾರ ಪ್ರಕಟಿಸಿತ್ತು.
ಈ ರಸ್ತೆಯಲ್ಲಿ ಹಗುರ ವಾಹನವೊಂದರ ಒಂದು ಬಾರಿ ಪ್ರಯಾಣಕ್ಕೆ 20 ರೂ ಮತ್ತು ಹೆವಿ ವಾಹನಗಳಿಗೆ 95 ರೂ. ಸುಂಕ ವಿಧಿಸಲಾಗಿತ್ತು. 22 ಕಿ.ಮೀ. ಹೆದ್ದಾರಿ ಪೂರ್ಣಗೊಳಿಸದೇ ಎನ್ ಡಿಟಿಪಿಎಲ್ ಟೋಲ್ ಸಂಗ್ರಹಕ್ಕೆ ಇಳಿದಿದೆ. ಆದರೆ ವಾಹನಗಳಿಂದ ಟೋಲ್ ಸಂಗ್ರಹಿಸುವ ಬಗ್ಗೆ ಡಿಟಿಪಿಎಲ್ ಸಂಸ್ಥೆಯ ಆಡಳಿತ ಮಂಡಳಿಯು ಸರ್ಕಾರದೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲದ್ದರಿಂದ ಇದಕ್ಕೆ ಅನುಮತಿ ನೀಡಲಾಗುವುದಿಲ್ಲವೆಂದು ಉದಾಸಿ ತಿಳಿಸಿದ್ದಾರೆ.












Click it and Unblock the Notifications