ಹೆಲ್ಸಿಂಕಿ, ಏ. 27 : ಕಳೆದ ಆರ್ಥಿಕ ಬಿಕ್ಕಟ್ಟಿನ ನಂತರ ಮರೆಯಾಗಿದ್ದ ಪಿಂಕ್ ಸ್ಪಿಪ್ ಭೂತದ ನೆರಳು ಮತ್ತೆ ಕಾಣಿಸಿಕೊಂಡಿದೆ. ಇದೀಗ ವಿಶ್ವದ ಬೃಹತ್ ಮೊಬೈಲ್ ಫೋನ್ ತಯಾರಿಕಾ ಕಂಪನಿ ನೋಕಿಯಾ ಸುಮಾರು 4 ಸಾವಿರ ಜನರಿಗೆ ಗೇಟ್ ಪಾಸ್ ನೀಡುವುದಾಗಿ ಪ್ರಕಟಿಸಿದೆ. ಕಂಪನಿಯ ಮುಂದಿನ ಬದಲಾವಣೆಯ ಉದ್ದೇಶಕ್ಕಾಗಿ 2012ರ ಅಂತ್ಯದೊಳಗೆ ನಾಲ್ಕು ಸಾವಿರದಷ್ಟು ಸಿಬ್ಬಂದಿ ಕಡಿತ ಮಾಡುವುದಾಗಿ ನೋಕಿಯಾ ಪ್ರಕಟಿಸಿ ನೌಕರರಲ್ಲಿ ಆತಂಕದ ಅಲೆಯೆಬ್ಬಿಸಿದೆ.
ಕಂಪನಿಯ ಉದ್ಯೋಗ ಕಡಿತ ನಿರ್ಧಾರ ಸಿಂಬಿಯನ್ ಮತ್ತು ಮಿಗೊ ಆರ್ ಆಂಡ್ ಡಿ ಮೇಲೆ ಭಾರೀ ಹೊಡೆತ ನೀಡುವ ನಿರೀಕ್ಷೆಯಿದೆ. ಇಷ್ಟೇ ಅಲ್ಲದೆ ಸುಮಾರು 3 ಸಾವಿರದಷ್ಟು ಸಿಬ್ಬಂದಿಗಳನ್ನು ಅಸೆಂಚರ್ ಸಿಂಬಿಯನ್ ಸಾಫ್ಟ್ ವೇರ್ ವಿಭಾಗಕ್ಕೆ ಹೊರಗುತ್ತಿಗೆ ಮಾಡಲು ಕಂಪನಿಯು ಯೋಜಿಸಿದೆ. "ಸ್ಮಾರ್ಟ್ ಫೋನ್ ಸಾಧನಗಳಲ್ಲಿ ನಮ್ಮ ನಾಯಕತ್ವ ಅಬಾಧಿತ. ಆದರೂ ನಮ್ಮ ಸಿಬ್ಬಂದಿ ಸಂಖ್ಯೆಯನ್ನು ತಗ್ಗಿಸುವ ಅನಿವಾರ್ಯತೆಯಲ್ಲಿದ್ದೇವೆ" ಎಂದು ನೋಕಿಯಾ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟಿಫಲ್ ಎಲೊಪ್ ಹೇಳಿದ್ದಾರೆ.
ಆಂಡ್ರಾಯ್ಡ್ ಆಧರಿತ ಸಾಧನಗಳ ಆಗಮನದ ನಂತರ ಕಂಪನಿಯ ಮಾಮೂಲಿ ಹ್ಯಾಂಡ್ ಸೆಟ್ ಗಳಿಗೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಕಂಪನಿಯು ತನ್ನ ಕಾರ್ಯಯೋಜನೆಗಳಲ್ಲಿ ಒಂದಿಷ್ಟು ರೂಪಾಂತರ ಮಾಡಿಕೊಳ್ಳಲು ಯೋಜಿಸಿದೆ. ಕಂಪನಿಯು ಈ ದೇಶದಲ್ಲಿ ಮೈಕ್ರೊಸಾಫ್ಟ್ ನ ವಿಂಡೋಸ್ ಫೋನ್ 7 ಅಪರೇಟಿಂಗ್ ಸಿಸ್ಟಮ್ ನಿಂದ ಕಾರ್ಯನಿರ್ವಹಿಸುವ ಸ್ಮಾರ್ಟ್ ಫೋನ್ ಗಳನ್ನು ಹೊರತರಲು ಯೋಜಿಸಿದೆ. ಕಂಪನಿಯ ನೂತನ ಉದ್ಯೋಗ ಕಡಿತದಿಂದಾಗಿ ವರ್ಷಕ್ಕೆ ಸುಮಾರು 146 ಕೋಟಿ ಡಾಲರ್ ವೆಚ್ಚ ಉಳಿತಾಯವಾಗಲಿದೆ.
World's largest mobile phone maker Nokia has announced its layoff plans as a part of the company's next step in transformation. According to their new plan, Nokia will lay off 4,000 employees by the end of 2012.
Story first published: Thursday, April 28, 2011, 10:55 [IST]