ಸುರೇಶ್ ಕಲ್ಮಾಡಿ ಮೇಲೆ ಬಿತ್ತು ಚಪ್ಲಿ ಏಟು !

ಭಾರಿ ಭ್ರಷ್ಟಾಚಾರದ ಚಕ್ರಸುಳಿಗೆ ಸಿಕ್ಕಿ ನಿನ್ನೆಯಷ್ಟೇ ಸಿಬಿಐನಿಂದ ಬಂಧನಕ್ಕೊಳಗಾಗಿದ್ದರೂ ಇನ್ನೂ ಕಾಮನ್ ವೆಲ್ತ್ ಕ್ರೀಡಾಕೂಟದ ಸಂಘಟನಾ ಸಮಿತಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿರುವ ಸುರೇಶ್ ಕಲ್ಮಾಡಿಯನ್ನು ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಪಟಿಯಾಲಾ ಹೌಸ್ ಕೋರ್ಟ್ ಗೆ ಮಂಗಳವಾರ ಕರೆದೊಯ್ಯುತ್ತಿದ್ದಾಗ ಈ ಘಟನೆ ನಡೆದಿದೆ. ಪೊಲೀಸರ ಗುಂಪಿನಲ್ಲಿ ಹೋಗುತ್ತಿದ್ದ ಕಲ್ಮಾಡಿಯನ್ನು ಹಿಂದಿನಿಂದ ಅಟ್ಟಿಸಿಕೊಂಡು ಹೋಗಿ ಕಪಿಲ್ ತನ್ನ ಚಪ್ಪಲಿಯನ್ನು ಎಸೆದಿದ್ದಾನೆ. ಕಪಿಲ್ ನನ್ನು ಪೊಲೀಸರು ತಕ್ಷಣ ವಶಕ್ಕೆ ತೆಗೆದುಕೊಂಡಿದ್ದಾರೆ.
ಹಾಸ್ಯ : 'ಉಡುಗೊರೆ'ಯಾಗಿ ಬಂದ ಚಪ್ಪಲಿಗೆ ಮ್ಯೂಸಿಯಂ!
ಅಣ್ಣಾ ಹಜಾರೆ ಇತ್ತೀಚೆಗಷ್ಟೆ ಭ್ರಷ್ಟಾಚಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಿ ಇಡೀ ದೇಶವನ್ನು ಬಡಿದೆಬ್ಬಿಸಿದ್ದಾರೆ. ಈ ಘಟನೆಯಿಂದ ಭ್ರಷ್ಟಾಚಾರದ ವಿರುದ್ಧ ಜನಸಾಮಾನ್ಯನ ಸಹನೆ ಕಟ್ಟೆಯೊಡೆದಿರುವುದು ಸಾಬೀತಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಚಪ್ಪಲಿ ಸೇವೆ ಮಾಡಿಸಿಕೊಂಡ ಯಡಿಯೂರಪ್ಪ, ಆಡ್ವಾಣಿ, ನಿತ್ಯಾನಂದ, ಚಿದಂಬರಂ, ಒಮರ್ ಅಬ್ದುಲ್ಲಾ, ಜಾರ್ಜ್ ಬುಷ್, ಮುಷರ್ರಫ್ ಮುಂತಾದವರ ಸಾಲಿಗೆ ಕಲ್ಮಾಡಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ.











Click it and Unblock the Notifications