ಬುಧವಾರ, ಗುರುವಾರ ರಾಜ್ಯ ಸಿಇಟಿ ಪರೀಕ್ಷೆ

Karnataka CET 2011
ಬೆಂಗಳೂರು: 2011ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಾಳೆ ಮತ್ತು ನಾಡಿದ್ದು ರಾಜ್ಯದ ಸುಮಾರು 235 ಕೇಂದ್ರಗಳಲ್ಲಿ ನಡೆಯಲಿದೆ. ಈ ಬಾರಿ ಸಿಇಟಿಯಲ್ಲಿ ಸುಮಾರು 1,16,967 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಬೆಂಗಳೂರಿನಲ್ಲಿ 58, ಮಂಗಳೂರಿನಲ್ಲಿ 12, ಶೀವಮೊಗ್ಗದಲ್ಲಿ 9, ಬೆಳಗಾವಿಯಲ್ಲಿ 14 ಪರೀಕ್ಷಾ ಕೇಂದ್ರಗಳಿವೆ. ಉಡುಪಿಯಲ್ಲಿ 8, ಮೈಸೂರಿನಲ್ಲಿ 12, ಹಾಸನದಲ್ಲಿ 5, ಧಾರವಾಡದಲ್ಲಿ 10 ಮತ್ತು ಬೀದರ್ ನಲ್ಲಿ 12 ಸಿಇಟಿ ಕೇಂದ್ರಗಳನ್ನು ತೆರೆಯಲಾಗಿದೆ. ದಾವಣಗೆರೆಯಲ್ಲಿ 10,ಚಿಕ್ಕಬಳ್ಳಾಪುರ ದಲ್ಲಿ 5, ಗುಲ್ಬರ್ಗದಲ್ಲಿ 11, ಬಳ್ಳಾರಿಯಲ್ಲಿ 7, ವಿಜಾಪುರದಲ್ಲಿ 6, ಚಿತ್ರದುರ್ಗದಲ್ಲಿ 4, ಬಾಗಲಕೋಟಿಯಲ್ಲಿ 6, ಚಿಕ್ಕಮಗಳೂರಿನಲ್ಲಿ 3, ಮಂಡ್ಯದಲ್ಲಿ 8 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.

ಟೈಂ ಟೇಬಲ್ ನೋಡಿಕೊಳ್ಳಿ: ನಾಳೆ ಅಂದ್ರೆ ಬುಧವಾರ ನಡೆಯಲಿರುವುದು ಜೀವಶಾಸ್ತ್ರ ಮತ್ತು ಗಣಿತ ಪರೀಕ್ಷೆ. ಬೆಳಗ್ಗೆ 10.30ರಿಂದ 11.50ರವರೆಗೆ ಜೀವಶಾಸ್ತ್ರ ಪರೀಕ್ಷೆ ನಡೆಯಲಿದೆ. ಅಪರಾಹ್ನ 2.30ರಿಂದ 3.50ರವರೆಗೆ ಗಣಿತ ಪರೀಕ್ಷೆ ನಡೆಯಲಿದೆ.

ಗುರುವಾರ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಬೆಳಗ್ಗೆ 10.30ರಿಂದ 11.50ರವರೆಗೆ ಭೌತಶಾಸ್ತ್ರ ಮತ್ತು ಮದ್ಯಾಹ್ನ 2.30ರಿಂದ 3.50ರ ತನಕ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಇಂದು (ಏಪ್ರಿಲ್ 26) ಮಧ್ಯಾಹ್ನ 2 ಗಂಟೆಗೆ ಗಡಿನಾಡು ಮತ್ತು ನಾಲ್ಕು ಗಂಟೆಗೆ ಹೊರನಾಡು ಅಭ್ಯರ್ಥಿಗಳಿಗೆ ಕನ್ನಡ ಭಾಷಾ ವಿಷಯದ ಪರೀಕ್ಷೆ ನಡೆಯಲಿದೆ.

ವಿದ್ಯಾರ್ಥಿಗಳಿಗೆ ಸೂಚನೆ: ವಿದ್ಯಾರ್ಥಿಗಳು ಮರೆಯದೇ ಪ್ರವೇಶ ಪತ್ರವನ್ನುತಂದಿರಬೇಕು. ಪ್ರವೇಶ ಪತ್ರದ ಹಿಂಭಾಗದಲ್ಲಿರುವ ಮಾಹಿತಿಗಳನ್ನು ಸರಿಯಾಗಿ ಓದಿಕೊಂಡು ಪರೀಕ್ಷೆ ಆರಂಭವಾಗುವ ಅರ್ಧಗಂಟೆ ಮುನ್ನ ಸಿಇಟಿ ಕೇಂದ್ರಕ್ಕೆ ಹಾಜರಾಗಬೇಕು ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ಪಡೆಯಲು ಸಹಾಯವಾಣಿ 080-23460554 ನಂಬರ್ ಗೆ ಕರೆ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+