ಪುಟ್ಟಪರ್ತಿಯಲ್ಲಿ ಸಾಯಿಬಾಬಾ ಭಕ್ತನ ಆತ್ಮಹತ್ಯೆ

ಮೃತನನ್ನು ತಂಜಾವೂರಿನ ತುಂಬಜ (52) ಎಂದು ಗುರುತಿಸಲಾಗಿದೆ. ತುಂಬಜ ಸಾಯಿಬಾಬಾ ಅವರ ದರ್ಶನಕ್ಕಾಗಿ ಆಗಮಿಸಿ ಪ್ರಶಾಂತಿಗ್ರಾಮದ ಲಾಡ್ಜ್‌ನಲ್ಲಿ ರೂಂ ಪಡೆದಿದ್ದನು. ಆದರೆ, ಬಾಬಾ ಇಹಲೋಕ ತ್ಯಜಿಸಿದ್ದಾರೆ ಎಂದು ತಪ್ಪಾಗಿ ತಿಳಿದು ಶುಕ್ರವಾರ ಕ್ರಿಮಿನಾಶಕ ಸೇವಿಸಿ ಆತ್ಯಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ವಿಡಿಯೋ : ಸತ್ಯ ಸಾಯಿಬಾಬಾ ಸ್ಥಿತಿ ಈಗ ಹೇಗಿದೆ?
ಆದರೆ, ತಂಜಾವೂರಿನ ತುಂಬಜ ಕುಟುಂಬ ಕಲಹದಿಂದ ಬೇಸತ್ತು ಬಂದಿದ್ದ, ಮೃತನು ಪುಟ್ಟಪರ್ತಿಯಲ್ಲಿ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪುಟ್ಟಪರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಯಿಬಾಬಾ 20 ದಿನಗಳ ಹಿಂದೆಯೇ ಮೃತಪಟ್ಟಿದ್ದಾರೆ ಎಂಬ ಸುದ್ದಿ ಕೂಡ ಎಲ್ಲೆಡೆ ಹಬ್ಬಿಸಲಾಗಿತ್ತು. ಇದರಿಂದ ಕಳವಳಕ್ಕೀಡಾಗಿರುವ ಬಾಬಾ ಭಕ್ತರು ಅಪಾರ ಸಂಖ್ಯೆಯಲ್ಲಿ ಪುಟ್ಟಪರ್ತಿಯಲ್ಲಿ ಜಮಾ ಆಗುತ್ತಿದ್ದಾರೆ. ಇದನ್ನು ಶ್ರೀ ಸತ್ಯ ಸಾಯಿ ಟ್ರಸ್ಟ್ ಸಾರಾಸಗಟಾಗಿ ತಳ್ಳಿಹಾಕಿದೆ. ಬಾಬಾ ಇನ್ನೂ ಜೀವಂತವಾಗಿದ್ದು, ಚೇತರಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇಟ್ಟಿದ್ದಾರೆ.
;










Click it and Unblock the Notifications