ವಿಕೃತ ಕಾಮಿ, ಕೊಲೆಗಾರನ ಹುಡುಕಾಟಕ್ಕೆ ಪೋಲಿಸರಿಗೆ ಸಹಕರಿಸಿ
ತುಮಕೂರು:
ಸುಮಾರು 19 ಕೊಲೆ ಮತ್ತು ಹಲವು ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿರುವ ಜೈಶಂಕರ್ ಎಂಬ ವಿಕೃತಕಾಮಿ, ಸೈಕೋ ಕಿಲ್ಲರ್ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ತುಮಕೂರು ಪೋಲಿಸರು ಸಾರ್ವಜನಿಕರನ್ನು ಕೇಳಿಕೊಂಡಿದ್ದಾರೆ. ಈತ ಪೋಲಿಸರ ವಶದಿಂದ ತಪ್ಪಿಸಿಕೊಂಡಿದ್ದು, ಒಂಟಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಕೊಲೆಗೈಯುವ ವಿಕೃತಕಾಮಿಯಾಗಿದ್ದಾನೆ. id="toptextpromo">ಇವನ
ಹೆಸರು ಎಂ. ಶಂಕರ್ ಆಲಿಯಾಸ್ ಜೈಶಂಕರ್. ಸುಮಾರು 19 ಕೊಲೆ, ಅತ್ಯಾಚಾರಗಳ ಪ್ರಕರಣಗಳಲ್ಲಿ ಪೋಲಿಸರಿಗೆ ಈತ ಮೋಸ್ಟ್ ವಾಂಟೆಡ್ ವ್ಯಕ್ತಿ. ವೃತ್ತಿಯಲ್ಲಿ ಚಾಲಕನಾಗಿದ್ದ ಈತನ ಕಪ್ಪು ಬ್ಯಾಗ್ ನಲ್ಲಿ ಮಚ್ಚು ಸದಾ ಇರುತ್ತದೆ. ಹೈವೇ ಬದಿಗಳಲ್ಲಿರುವ ಒಂಟಿ ಮನೆಗಳಿಗೆ ನುಗ್ಗಿ ಮಹಿಳೆಯರನ್ನು ಅತ್ಯಾಚಾರ ಮಾಡಿ ಕೊಲೆ ಮಾಡುತ್ತಾನೆ. ಯಾರಾದರೂ ಅಡ್ಡ ಬಂದರೆ ಮುಲಾಜಿಲ್ಲದ್ದೆ ಕತ್ತರಿಸಿ ಹಾಕುತ್ತಾನೆ ಎಂದು ಪೋಲಿಸರು ಎಚ್ಚರಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈತನ
ಬಗ್ಗೆ ಸುಳಿವು ಸಿಕ್ಕಲ್ಲಿ ತುಮಕೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ 0816-2278000 ಅವರಿಗೆ ಮಾಹಿತಿ ನೀಡಬಹುದು. ಅಥವಾ ತುಮಕೂರು ಗ್ರಾಮಾಂತರ ಸಿಪಿಐ ಓ.ಬಿ. ಕಲ್ಲೇಶಪ್ಪ ಅವರನ್ನು ಮೊಬೈಲ್-9480802931 ಮೂಲಕ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.











Click it and Unblock the Notifications