ಮಕ್ಕಳನ್ನು ರಕ್ಷಿಸಲು ಹೋಗಿ ಬಲಿಯಾದ ತಂದೆ
ಕೋಲಾರ,
ಏ. 19 : ವಿದ್ಯುತ್ ಆಘಾತಕ್ಕೊಳಗಾದ ಇಬ್ಬರು ಮಕ್ಕಳನ್ನು ರಕ್ಷಿಸಲು ಹೋಗಿ ವ್ಯಕ್ತಿಯೊಬ್ಬರು ವಿದ್ಯುದಾಘಾತಕ್ಕೀಡಾಗಿ ಮರಣಿಸಿದ ದುರಂತ ಘಟನೆ ಮಾಲೂರು ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ಘಟಿಸಿದೆ. id="toptextpromo">ಅಂಬರೀಷ್
ಎಂಬುವವರು ಸಾವಿಗೀಡಾದವರು. ಅಂಬರೀಷ್ ಅವರ ಮಗಳಾದ ರಕ್ಷಿತ್ ಮತ್ತು ಅವರ ಸಹೋದರರ ಮಗಳು ಸಂಗೀತಾ ಹೊಲದಲ್ಲಿ ಆಟವಾಡುತ್ತಿದ್ದ ಸಮಯದಲ್ಲಿ ಅಕಸ್ಮಾತಾಗಿ ವಿದ್ಯುತ್ ಹರಿಯುತ್ತಿದ್ದ ತಂತಿಯನ್ನು ಮುಟ್ಟಿದ್ದಾರೆ. ಅವರ ಕೂಗು ಕೇಳಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ಅಂಬರೀಷ್ ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ತಾನೊಂದು
ಬಗೆದರೆ ಮಾನವ ಬೇರೊಂದು ಬಗೆವುದು ದೈವ ಎನ್ನುವಂತೆ, ರಕ್ಷಿತ್ ಮತ್ತು ಸಂಗೀತಾ ಅವರನ್ನು ಪಾರು ಮಾಡಿದ ಅಂಬರೀಷ್ ಅವರೇ ವಿದ್ಯುದಾಘಾತಕ್ಕೀಡಾಗಿದ್ದಾರೆ. ವಿದ್ಯುತ್ ರೂಪದಲ್ಲಿ ಬಂದ ಜವರಾಯ ಅವರನ್ನು ಬಲಿತೆಗೆದುಕೊಂಡಿದ್ದಾನೆ. ಆಘಾತಕ್ಕೊಳಗಾಗಿದ್ದ ರಕ್ಷಿತ್ ಮತ್ತು ಸಂಗೀತಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಬರೀಷ್ ಅವರ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಬೆಸ್ಕಾಂ ತಿಳಿಸಿದೆ.











Click it and Unblock the Notifications