ಕರ್ನಾಟಕ ಪ್ರವಾಸಕ್ಕೆ ರಾಹುಲ್ ಗಾಂಧಿ ಸಜ್ಜು

Rahul Gandhi visit to Karnataka
ಉಡುಪಿ, ಏ.19: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ, ಯುವ ಕಾಂಗ್ರೆಸ್ ಉಸ್ತುವಾರಿ ರಾಹುಲ್ ಗಾಂಧಿ ಅವರು ಏ.20ರಂದು ಕರ್ನಾಟಕ ಪ್ರವಾಸ ನಡೆಸಲಿದ್ದಾರೆ. ಕಾಂಗ್ರೆಸ್‌ನ ಸದಸ್ಯತ್ವ ಅಭಿಯಾನಕ್ಕೆ ಚುರುಕು ನೀಡಲಿದ್ದಾರೆ. ನಟಿ ರಮ್ಯಾ ರಾಹುಲ್ ಅವರ ವ್ಯಕ್ತಿತ್ವದಿಂದ ಪ್ರೇರಿತರಾಗಿ ಕಾಂಗ್ರೆಸ್ ಸೇರುತ್ತಿರುವುದಾಗಿ ಘೋಷಿಸಿದ ಮೇಲೆ, ಯುವ ಕಾಂಗ್ರೆಸ್ ಸೇರಲು ಯುವಕರು ಹಾತೊರೆಯುತ್ತಿದ್ದಾರೆ ಎಂಬ ಸುದ್ದಿ ಬಂದಿದೆ.

ಬುಧವಾರ ಬೆಳಗ್ಗೆ ಬಿಜಾಪುರಕ್ಕೆ ಭೇಟಿ, ಉಪಹಾರ ಸೇವನೆ, ನಂತರ ಮಧ್ಯಾಹ್ನ ಉಡುಪಿಯಲ್ಲಿ ಊಟ ಮತ್ತು ಸಂಜೆ ಬೆಂಗಳೂರಿನಲ್ಲಿ ತಿಂಡಿ ಮಧ್ಯೆ ಮಧ್ಯೆ ಯುವ ಜನರ ಜೊತೆಗೆ ಖಾಸಗಿ ಸಂವಾದ, ಯುವ ಕಾಂಗ್ರೆಸ್ ಮಹತ್ವದ ಬಗ್ಗೆ ಬೋಧನೆ ಇವಿಷ್ಟು ರಾಹುಲ್ ಗಾಂಧಿ ದಿನಚರಿಯಲ್ಲಿದೆ. ಬುಧವಾರ ಮಧ್ಯಾಹ್ನ 12 ಗಂಟೆಗೆ ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ಕಾರ್ಯಕರ್ತರ ಜೊತೆಗೆ ಆಪ್ತ ಮಾತುಕತೆ ನಡೆಸಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತಿ ಬೂತ್ ಮಟ್ಟದಿಂದ ಒಬ್ಬರಂತೆ ಸುಮಾರು ಎರಡು ಸಾವಿರ ಯುವ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕಾಂಗ್ರೆಸ್ ಮುಖಂಡರಾದ ಭಾಸ್ಕರ್ ಮೊಯ್ಲಿ, ಶಶಿಧರ್ ಹೆಗ್ಡೆ, ಸಂತೋಷ್ ಶೆಟ್ಟಿ, ಕೆ ಸುಧೀರ್ ಅವರು ಬಂಟ್ವಾಳಎಂಎಲ್ ಎ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಬೃಹತ್ ಸದಸ್ಯತ್ವ ನೋಂದಣಿ ಅಭಿಯಾನವನ್ನು ರಾಹುಲ್ ಉದ್ಘಾಟಿಸಲಿದ್ದಾರೆ. ಸುಮಾರು 5 ಸಾವಿರ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ ಇಲ್ಲೆ ಇಳಿಯುವರೋ ಅಥವಾ ದೆಹಲಿಗೆ ತೆರಳುತ್ತಾರೋ ಗೊತ್ತಿಲ್ಲ. ಅವರ ಆಗಮನಕ್ಕೆ ನಾವು ಕಾದಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಹೇಳಿದ್ದಾರೆ. ಕಾಂಗ್ರೆಸ್ ಪದಾಧಿಕಾರಿಗಳ ನೇಮಕಾತಿಯಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ರಾಹುಲ್ ಏನು ಹೇಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+