ಹುಳಿಮಾವಿನಲ್ಲಿ ಮಗನ ಕೊಂದು ತಾಯಿ ಆತ್ಮಹತ್ಯೆ
ಬೆಂಗಳೂರು,
ಏ.16: ತನ್ನ ಮಗನನ್ನು ಉಸಿರುಗಟ್ಟಿಸಿ ಕೊಂದು ತಾಯಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಹುಳಿಮಾವು ಪ್ರದೇಶದಲ್ಲಿ ಶನಿವಾರ (ಏ.16) ನಡೆದಿದೆ. ಹುಳಿಮಾವು ಪ್ರದೇಶದ ಧರಣಿ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು ಹುಳಿಮಾವು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. id="toptextpromo">ಸರಿತಾ
(31) ಎಂಬುವವರು ತನ್ನ ಆರು ವರ್ಷದ ಮಗ ಜಾಕೀರ್ ಹುಸೇನ್‌ನನ್ನು ಕೊಂದು ಬಳಿಕ ತಾವು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. id='are-slot-1' class='oiad oi-axt oiadv'> id='top-searched-articles'> ಈ ಘಟನೆ ನಡೆದಾಗ ಮೃತರ ಪತಿ ಹೊರ ಊರಿನಲ್ಲಿದ್ದರು ಎನ್ನಲಾಗಿದೆ. ಮೃತರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯವರು ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಬಲವಾದ ಕಾರಣ ಏನಿರಬಹುದು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.











Click it and Unblock the Notifications