ರಂಗಶಂಕರದಲ್ಲಿ ಮತ್ತೆ ತೇಜಸ್ವಿ ಜುಗಾರಿ ಕ್ರಾಸ್ !

ನಟರಾಜ ಹೊನ್ನವಳ್ಳಿಯವರ ನಿರ್ದೇಶನದ ಈ ನಾಟಕ ಈಗಾಗಲೇ 50 ಪ್ರದರ್ಶನಗಳನ್ನು ಕಂಡಿದೆ. ಏಪ್ರಿಲ್ 16 ರಂದು ಸಂಜೆ 7.30 ಕ್ಕೆ ಮತ್ತು ಏಪ್ರಿಲ್ 17 ರಂದು ಭಾನುವಾರ ಮಧ್ಯಾಹ್ನ 3.30 ಮತ್ತು ಸಂಜೆ 7.30ಕ್ಕೆ ಎರಡು ಪ್ರದರ್ಶನಗಳಿವೆ. ಟಿಕೆಟ್ ದರ 70 ರೂಪಾಯಿಗಳು.
ಜುಗಾರಿ ಕ್ರಾಸ್ ಬಗ್ಗೆ : ಕನ್ನಡ ಸಾಹಿತ್ಯ ಲೋಕದಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಯವರ ಜುಗಾರಿ ಕ್ರಾಸ್ ಒಂದು ವಿಶಿಷ್ಟ ಕಾದಂಬರಿ. ಕಾಡುಗಳ್ಳರ.ಕಾಳದಂಧೆಗಳ ಕುರಿತು ಈ ಕೃತಿಯಲ್ಲಿ ಮಾತನಾಡುವ ತೇಜಸ್ವಿಯವರು ಪರಿಸರ, ಪ್ರಾಕೃತಿಕ ಸಂಪತ್ತು, ಅವುಗಳನ್ನು ಕಾಪಾಡುವ ಬಗ್ಗೆ ತಮ್ಮದೇ ನೆಲೆಯಲ್ಲಿ ಮಾತನಾಡುತ್ತ ಬಂದವರು. ಕಾಡು ಮೇಡುಗಳಲ್ಲಿ ಅಲೆಯುತ್ತ ಪಕ್ಷಿ ಪರಿಸರಗಳ ಕುರಿತು ವಿಶೇಷ ಅಧ್ಯಯನ ಮಾಡಿದ ತೇಜಸ್ವಿ ಕಟ್ಟಿಕೊಟ್ಟ ಕಥೆಯನ್ನು ನಾಟಕ ರೂಪಕ್ಕೆ ತಂದವರು ಕನ್ನಡ ರಂಗಭೂಮಿಯ ಮತ್ತೊಬ್ಬ ವಿಶೇಷ ಪ್ರತಿಭೆ ನಟರಾಜ ಹೊನ್ನವಳ್ಳಿ ಯವರು.
ನಾಟಕ : ಜುಗಾರಿ ಕ್ರಾಸ್
ರಚನೆ : ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ನಾಟಕ ರೂಪ ಮತ್ತು ನಿರ್ದೇಶನ : ನಟರಾಜ್ ಹೊನ್ನವಳ್ಳಿ
ಸಂಗೀತ :ಗಜಾನನ ಟಿ. ನಾಯ್ಕ
ಸ್ಥಳ : ರಂಗಶಂಕರ, ಜೆ.ಪಿ. ನಗರ. ಬೆಂಗಳೂರು
ದಿನಾಂಕ/ವಾರ : 16.04.2011 ಶನಿವಾರ ಮತ್ತು 17.042011ಭಾನುವಾರ
ಸಮಯ : ಶನಿವಾರ ಸಂಜೆ 7.30 ಹಾಗೂ ಭಾನುವಾರ : 3.30, 7.30
ಸಂಪರ್ಕಿಸಿ : 99001 82400.
ವೆಬ್ ಸೈಟ್ : www.indianstage.in
ನಾಟಕದ ವಿವರ: ಈ ನಾಟಕ ಕೇವಲ 24 ಗಂಟೆಗಳಲ್ಲಿ ನೆಡೆಯುವ ಒಂದು ರೊಮ್ಯಾಂಟಿಕ್ ಥ್ರಿಲ್ಲರ್, ಜೊತೆಗೆ ಇದು ನಿಜವಾಗಿಯೂ ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯಬಹುದಾದ ವಾಸ್ತವದ ಸಾಮಾಜಿಕ ಕಾದಂಬರಿ. ಮಲೆನಾಡಿನ ದಟ್ಟ ಕಾಡೇ ಕಾಳ ಧಂಧೆಗಳ ತವರೂರಾಗುವುದು, ಕಾಡಿನಿಂದ ಉತ್ಪತ್ತಿಯಾಗುವ ಕಾಳಧನ ದೇಶದ ರಾಜಕೀಯವನ್ನೇ ನಿಯಂತ್ರಿಸುವುದು, ಈ ಕಾಳ ವ್ಯವಹಾರಗಳ ಜೊತೆಜೊತೆಗೇ ಡ್ರಗ್ಸ್ ಮಾಫಿಯಾ ಜೂಜು ಸೇರಿ, ಅನೇಕ ವೇಳೆ ಇದ್ಯಾವುದಕ್ಕ್ಕೂ ಸಂಬಂಧಿಸದ ಮುಗ್ಧರನ್ನೂ ಪ್ರಾಣಾಪಾಯದ ಅಂಚಿಗೆ ತಳ್ಳಬಹುದು ಎಂಬುದೇ ಈ ಕಥೆಯ ಹಿನ್ನೆಲೆ.
ಏಲಕ್ಕಿ ಬೆಳೆಗಾರ ಸುರೇಶ ಮತ್ತು ಅವನ ಹೆಂಡತಿ ಗೌರಿ ಏಲಕ್ಕಿ ವ್ಯಾಪಾರಕ್ಕೆಂದು ಪೇಟೆಗೆ ಬಂದವರು, ಅವರಿಗೇ ತಿಳಿಯದೇ ಕಳ್ಳ ಧಂಧೆಗೆ ಸಿಕ್ಕಿಕೊಂಡು ಕ್ಷಣ ಕ್ಷಣಕ್ಕೂ ರೋಚಕವಾಗಿ ಸಾಗುವ, ಬೆಚ್ಚಿಬೀಳಿಸುವ ಅಂಡರ್‌ವರ್ಲ್ಡ್‌ನ ಕಥೆಯೊಂದಿಗೆ ಹೆಣೆದುಕೊಂಡಿರುವ ನಾಟಕವೇ ಜುಗಾರಿ ಕ್ರಾಸ್.












Click it and Unblock the Notifications