ವೈದ್ಯರ ಪ್ರಮಾದ: ಕಂದನಿಗಾಗಿ ಅಪ್ಪನ ಉಪವಾಸ

ಒಂದು ವರ್ಷದ ಹಿಂದೆ ಏನಾಯಿತೆಂದರೆ ... 'ಮಾರ್ಚ್ 15ರಂದು ನನ್ನ ಮಗ ಜಾನ್ ರೊನಾಲ್ಡೊ ಕಾಫಿ ಕುಡಿಯುತ್ತಿದ್ದಾಗ ಮೈಮೇಲೆ ಕಾಫಿ ಚೆಲ್ಲಿಕೊಂಡ. ಶೇ. 10ರಷ್ಟು ಸುಟ್ಟ ಗಾಯಗಳಾದವು. ತಕ್ಷಣ ಮಗುವನ್ನು ಕೋರಮಂಗಲದಲ್ಲಿರುವ ಸೆಂಟ್ ಜಾನ್ಸ್ ಆಸ್ಪತ್ರೆಗೆ ಸೇರಿಸಿದೆ. ಅಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡುವಾಗ ಎಡವಟ್ಟು ಮಾಡಿದರು. ಅದರಿಂದ ಉಸಿರಾಟ ತೊಂದರೆ ಕಾಣಿಸಿಕೊಂಡಿತು. ಜತೆಗೆ ಮೆದುಳಿನಲ್ಲಿ ರಕ್ತಸ್ರಾವವೂ ಆಯಿತು. ಅಂದಿನಿಂದ ನನ್ನ ಮಗ ಜೀವಚ್ಚವವಾಗಿದ್ದಾನೆ' ಎಂದು ಮಗುವಿನ ತದೆ ಕಿರಣ್ ಚಂದರ್ ಗೋಳಾಡುತ್ತಾರೆ.
ಗಂಟಲಿನ ಮೂಲಕ ಪೈಪು ಅಳವಡಿಸಿ, ಅವನಿಗೆ ಉಸಿರಾಟಕ್ಕೆ ಅನುವುಮಾಡಿಕೊಡಲಾಗಿದೆ. ಇದಕ್ಕೆ ಆಸ್ಪತ್ರೆಯ ವೈದ್ಯರು ಎಸಗಿದ ಪ್ರಮಾದವೇ ಕಾರಣ ಎನ್ನುತ್ತಾರೆ ಕಿರಣ್. ಸೆಂಟ್ ಜಾನ್ಸ್ ಆಸ್ಪತ್ರೆಯ ಶಿಶು ಚಿಕಿತ್ಸೆ ವಾರ್ಡ್ ನಲ್ಲಿ ಜಾನ್ ಒಂದು ವರ್ಷದಿಂದ ಇದ್ದಾನೆ. ಆದರೆ ಮಗುವನ್ನು ಬೇರೆ ಆಸ್ಪತ್ರೆಗೆ ಸೇರಿಸಿ ಎಂದು ವೈದ್ಯರು ಇತ್ತೀಚೆಗೆ ಕಿರಣ್ ಗೆ ದುಂಬಾಲು ಬಿದ್ದಿದ್ದಾರೆ. ಸರಿಯಾದ ಡಿಸ್ ಚಾರ್ಜ್ ಸಮರಿ ಸಹ ನೀಡುತ್ತಿಲ್ಲ. ಒಂದು ವರ್ಷದಿಂದ ಎಲ್ಲ ವೈದ್ಯಕೀಯ ವೆಚ್ಚಗಳನ್ನೂ ನಾನೇ ಭರಿಸಿರುವೆ. ಮುಂದಿನ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಆಸ್ಪತ್ರೆಯೇ ಭರಿಸಿ, ಸಮರ್ಪಕ ಚಿಕಿತ್ಸೆ ಮುಂದುವರಿಸಬೇಕು. ಅದುವರೆಗೆ ಉಪವಾಸ ಮಾಡುವುದಾಗಿ ಕಿರಣ್ ಆಸ್ಪತ್ರೆಗೆ ತಿಳಿಸಿದ್ದಾರೆ.
ಭಾರತೀಯ ವೈದ್ಯಕೀಯ ಮಂಡಳಿ ನೆರವನ್ನು ಪಡೆಯಲು ಆಲೋಚಿಸಿರುವ ಕಿರಣ್ ಶನಿವಾರದಿಂದ ಉಪವಾಸ ಆರಂಭಿಸುವುದಾಗಿ ಹೇಳಿದ್ದಾರೆ. ಅವರಿಗೆ ಗ್ಲೋಬಲ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ ಎಂಬ ಸ್ವಯಂಸೇವಾ ಸಂಸ್ಥೆ ನೆರವಿಗೆ ಬಂದಿದೆ. ಈ ಮಧ್ಯೆ, ಆಸ್ಪತ್ರೆಯ ಶಿಶು ವಿಭಾಗದ ಡಾ. ಫೆಲ್ಟನ್ ಡಿಸೋಜಾ ಅಥವಾ ಆಸ್ಪತ್ರೆಯ ಮುಖ್ಯಾಧಿಕಾರಿ ಪ್ರಕರಣದ ಬಗ್ಗೆ ತುಟಿಬಿಚ್ಚುತ್ತಿಲ್ಲ.












Click it and Unblock the Notifications