ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮನ ಪಕ್ಷದಲ್ಲಿ ಪುರುಷೋತ್ತಮರ ಆಯ್ಕೆಗೆ ಅಗ್ನಿಪರೀಕ್ಷೆ

By Srinath
|
Google Oneindia Kannada News

ಭೋಪಾಲ್, ಏ. 12: ಭಾರತೀಯ ಜನತಾ ಪಕ್ಷದಲ್ಲಿ ಸಂಘಟನಾ ಹುದ್ದೆಗಳನ್ನು ಅಲಂಕರಿಸಬೇಕೆಂದರೆ ಸತತವಾಗಿ ಮೂರು ಹಂತದಲ್ಲಿ ಅಗ್ನಿಪರೀಕ್ಷೆಗೊಳಗಾವುದನ್ನು ಕಡ್ಡಾಯಗೊಳಿಸಲಾಗಿದೆ. ಪಕ್ಷದಲ್ಲಿ ಉತ್ತಮ ನಾಯಕರು ರಾರಾಜಿಸಲಿ ಎಂದು ಬಯಸಿರುವ ಮಧ್ಯಪ್ರದೇಶ ಆಡಳಿತಾರೂಢ ಬಿಜೆಪಿ, ಈ ಮಾಸಾಂತ್ಯ ಮೊದಲ ಹಂತದ ಪರೀಕ್ಷೆ ನಿಗದಿಗೊಳಿಸಿದ್ದು, 220 ಅಭ್ಯರ್ಥಿಗಳು ಹಾಜರಾಗಲಿದ್ದಾರೆ.

ಸಾಮಾನ್ಯವಾಗಿ ರಾಜಕಾರಿಣಿಗಳಿಗೂ ವಿದ್ಯೆಗೂ ದೂರದ ಸಂಬಂಧ. ಅಂತಹುದರಲ್ಲಿ ಪಕ್ಷದಲ್ಲಿ ಶಿಕ್ಷಿತ ನಾಯಕರು ಇರಲಿ ಎಂದು ಬಿಜೆಪಿ ಎಣಿಸಿದೆ. ಪಕ್ಷದಲ್ಲಿ 'ಪದವಿ' ಗಳಿಸಬೇಕೆಂದರೆ ಪ್ರವೇಶ, ಪ್ರಗತ್ ಮತ್ತು ಪ್ರವೀಣ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದು ಅನಿವಾರ್ಯವಾಗಿದೆ. ನಿತಿನ್ ಗಡ್ಕರಿ ಅವರು ಪಕ್ಷದ ಚುಕ್ಕಾಣಿ ಹಿಡಿದ ಮೇಲೆ ಪಕ್ಷದ ಕಾರ್ಯಕರ್ತರಿಗೆ ಇಂತಹ ಅಗ್ನಿಪರೀಕ್ಷೆಯೊಡ್ಡಿದ್ದಾರೆ.

ಮೊದಲ ಹಂತದಲ್ಲಿ ಏಪ್ರಿಲ್ 23 ಮತ್ತು 24ರಂದು ಮಧ್ಯಪ್ರದೇಶದಲ್ಲಿನ ಪಕ್ಷದ ನಾಯಕರಿಗೆ ಭೋಪಾಲ್ ನಲ್ಲಿ ತರಬೇತಿ ಕಾರ್ಯಾಗಾರ ನಡೆಸಲಾಗುವುದು. ಬಳಿಕ, ಏಪ್ರಿಲ್ 25ರಂದು ಪ್ರವೇಶ ಪರೀಕ್ಷೆ ನಿಕ್ಕಿಯಾಗಿದೆ. ಅಭ್ಯರ್ಥಿಗಳ ಅರ್ಥಾತ್ ಪಕ್ಷದ ನಾಯಕರು ಹೊಂದಿರುವ ಸಾಮಾನ್ಯ ಜ್ಞಾನ ಮಟ್ಟ ಅರಿಯಲು ಆಬ್ಜೆಕ್ಟೀವ್ ಟೈಪ್ ಪರೀಕ್ಷೆ ನಡೆಯಲಿದೆ. ಪಕ್ಷದ ಧ್ಯೇಯೋದ್ದೇಶಗಳು, ರಾಷ್ಟ್ರೀಯ ಸ್ತರದ ರಾಜಕೀಯ ಆಗುಹೋಗುಗಳು ಪರೀಕ್ಷೆ ವಿಷಯಗಳಾಗಿರುತ್ತವೆ.

ಇಲ್ಲಿ ತೇರ್ಗಡೆಯಾದ ಬಳಿಕ ಮುಂದಿನ 'ಪ್ರಗತಿ' ಪರೀಕ್ಷೆ. ಆ ನಂತರವಷ್ಟೇ 'ಪ್ರವೀಣ' ನಾಯಕರ ಆಯ್ಕೆ. ಅನುತ್ತೀರ್ಣರು ಪಕ್ಷದ ಬಾಗಿಲು ಬಡಿಯಲು ಮುಂದಿನ ವರ್ಷದ ವರೆಗೂ ಕಾಯಬೇಕು. ಅಗ್ನಿ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಬಳಿಕ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಮಾನದಂಡವಾಗಿರಿಸಿಕೊಂಡು ತಕ್ಕ ಜವಾಬ್ದಾರಿಯನ್ನು ಹೊರೆಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

English summary
To get organizational posts in BJP in Madhya Pradesh, the party cadres will have to take up written examinations compulsorily at three levels to qualify for being appointed office-bearers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X