ಆಟವಾಡುತ್ತಿದ್ದ ಮಗು ಮಹಡಿಯಿಂದ ಬಿದ್ದು ಸಾವು
ಬೆಂಗಳೂರು,
ಏ. 12: ವಿಧಿ ಅಟ್ಟಹಾಸ ಮೆರೆದಿದೆ. ತನ್ನ ಮಹಡಿ ಮನೆಯಲ್ಲಿ ಆಟವಾಡುತ್ತಿದ್ದ ಮುದ್ದಾದ ಮಗು ನೆಲಕ್ಕೆ ಬಿದ್ದು ಸ್ಥಳದಲ್ಲಿಯೇ ಪ್ರಾಣಬಿಟ್ಟಿದೆ. ಶ್ರೀನಿವಾಸ ನಗರ ಬ್ಯಾಂಕ್ ಕಾಲೊನಿಯಲ್ಲಿ ಸೋಮವಾರ ರಾತ್ರಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಮೃತ ನಯನಾ ಮನೋಜ್ ಕುಮಾರ್ ಅವರ ಪುತ್ರಿ. ನಯನಾಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. id="toptextpromo">ಒಂದೂವರೆ
ವರ್ಷದ ನಯನಾ ತನ್ನ ಪಾಡಿಗೆ ತಾನು ಆಟವಾಡಿಕೊಂಡಿದ್ದಳು. ಆ ಸಂದರ್ಭದಲ್ಲಿ ಮನೆಯ ಹಿರಿಯರು ಮಗುವಿನತ್ತ ಹೆಚ್ಚಿನ ಲಕ್ಷ್ಯವಹಿಸಿಲ್ಲ. ಆದರೆ ಕೆಳಗೆ ಬಿದ್ದ ಹಾಲಿನ ಲೋಟವನ್ನು ಎತ್ತಿಕೊಳ್ಳುವಾಗ ಯಾವುದೋ ಮಾಯದಲ್ಲಿ ಆಯತಪ್ಪಿ ನಯನಾ ಕೆಳಗೆ ಬಿದ್ದಿದ್ದಾಳೆ. ಬಿದ್ದ ಏಟಿಗೆ ಮಗುವಿಗೆ ಹೆಚ್ಚಿನ ಗಾಯಗಳಾಗಿಲ್ಲವಾದರೂ ಮಗುವನ್ನು ಸಾವು ಕರೆದೊಯ್ದಿದೆ. ಶಬ್ದ ಕೇಳಿ ಪೋಷಕರು ಕೆಳಗಿಳಿದು ಬರುವ ವೇಳೆಗೆ ನಯನಾ ಪ್ರಾಣಪಕ್ಷಿ ಹಾರಿತ್ತು. id='are-slot-1' class='oiad oi-axt oiadv'> id='top-searched-articles'>ಶ್ರೀನಿವಾಸ
ನಗರ 3ನೆ ಮುಖ್ಯ ರಸ್ತೆ, ಮೂರನೇ ಅಡ್ಡ ರಸ್ತೆಯಲ್ಲಿರುವ ಸಿವಿಲ್ ಎಂಜಿನಿಯರ್ ಮನೋಜ್ ಅವರ ಮನೆಯಲ್ಲಿ ರಾತ್ರಿ 10 ಗಂಟೆಯಲ್ಲಿ ಈ ದಾರುಣ ಘಟನೆ ನಡೆದಿದೆ. ಮನೋಜ್ ತಮ್ಮ ಮಗ ಮತ್ತು ಪತ್ನಿಯೊಂದಿಗೆ ಟಿವಿ ನೋಡಿಕೊಂಡು ಊಟಮಾಡುತ್ತಿದ್ದರು. ಆ ಸಂದರ್ಭದಲ್ಲಿ ನಯನಾ ಏಕಾಂಗಿಯಾಗಿ ಹೊರಬಂದು ದುರಂತ ಸಾವನ್ನಪ್ಪಿದ್ದಾಳೆ.











Click it and Unblock the Notifications