• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಂಇಎಸ್ ಬೆಂಬಲಿತ ಮಂದಾ ಬೆಳಗಾವಿ ಮೇಯರ್

By Mahesh
|

ಬೆಳಗಾವಿ, ಏ. 8: ಕನ್ನಡಿಗ ಮೇಯರ್ ನಿಂಗಪ್ಪ ಬಸಪ್ಪ ನಿರ್ವಾಣಿ ಅವರ ಅಧಿಕಾರ ಅವಧಿ ಮುಗಿದ ಬಳಿಕ ಅಪ್ಪಟ ಕನ್ನಡಿಗ ಮಹಾಪೌರರನ್ನು ನಿರೀಕ್ಷಿಸಿದ್ದ ಕುಂದಾನಗರಿ ಜನತೆ ಮನಸ್ಸಿಗೆ ಘಾಸಿಯಾಗಿದೆ. ಮಹಾನಗರ ಪಾಲಿಕೆ 23ನೇ ಮೇಯರ್ ಆಗಿ ಸರ್ವಭಾಷಿಕ ಸಮವಿಚಾರ ವೇದಿಕೆಯ ಅಭ್ಯರ್ಥಿ 29ನೇ ವಾರ್ಡಿನ ಮಂದಾ ಸುನೀಲ ಬಾಳೇಕುಂದ್ರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದೊಮ್ಮೆ ಕನ್ನಡ ಮೇಯರ್ ಯೊಬ್ಬರಿಗೆ ಚಪ್ಪಲಿ ತೋರಿಸಿ ಎಂಇಎಸ್ ಜತೆ ಕಾಣಿಸಿಕೊಂಡಿದ್ದ ಈಕೆ ಈಗ ಕನ್ನಡ ಬಾವುಟ ಹಿಡಿದಿದ್ದಾರೆ.

ಇಲ್ಲಿನ ಮಹಾಪೌರರ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು.ಈ ಜಾತಿಗೆ ಸೇರಿದ ಇಬ್ಬರು ಅಭ್ಯರ್ಥಿಗಳು ಮಾತ್ರ ಪಾಲಿಕೆಯಲ್ಲಿದ್ದರು. ಪ್ರತಿಸ್ಪರ್ಧಿಯಾಗಿ ನಾಮಪತ್ರ ಸಲ್ಲಿಸಿದ್ದ ವಾರ್ಡ್ ನಂ.45ರ ನಗರ ಸೇವಕಿ ವಂದನಾ ಬೀಳಗಿ ಕೊನೆ ಗಳಿಗೆಯಲ್ಲಿ ನಾಮಪತ್ರ ಹಿಂದಕ್ಕೆ ತೆಗೆದು ಕೊಂಡಿದ್ದು, ಮಂದಾ ಅವರ ಗೆಲುವಿಗೆ ಕಾರಣವಯಿತು.

ಯಾವುದೇ ಗೌಜು ಗದ್ದಲ ಗಲಾಟೆ ಗೊಂದಲ ಹೊಡೆದಾಟ ಬಡಿದಾಟವಿಲ್ಲದೆ ಶಾಂತವಾಗಿ, ಅವಿರೋಧವಾಗಿ ಮೇಯರ್ ಆಯ್ಕೆ ಪ್ರಕ್ರಿಯೆ ನಡೆದಿದ್ದು ಅಚ್ಚರಿಯ ಅಂಶ ಎನಿಸಿತ್ತು. ಚುನಾವಣೆ ಅಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರಾಗಿದ್ದ ಸಿಎಂ ಶಿರೋಳ ಚುನಾವಣೆ ಫಲಿತಾಂಶ ಪ್ರಕಟಿಸಿ, ಮಂದಾ ಸುನೀಲ ಬಾಳೆಕುಂದ್ರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಹೇಳಿದರು.

ಕಳೆದ ಮೂರು ಅವಧಿಗೆ ಕನ್ನಡ ಅಭ್ಯರ್ಥಿಗಳು ಮೇಯರ್ ಆಗಿ ಆಯ್ಕೆಯಾಗಿದ್ದರು. ಈ ಬಾರಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಎಂಎ ಪದವೀಧರೆ ಮಂದಾ ಬಾಳೇಕುಂದ್ರಿ ಮೇಯರ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೇಯರ್ ಆಗಿ ಆಯ್ಕೆಯಾದ ಅನಂತರ ಸುದ್ದಿಗಾರರ ಜತೆ ಮಾತನಾಡಿದ ಮಂದಾ ಬಾಳೇ ಕುಂದ್ರಿ, ತಾವು ಯಾವುದೇ ಜಾತಿ, ಮತ, ಪಂಥಗಳ ಕುರಿತು ವಿವಾದಾತ್ಮಕ ನಿಲುವು ತೆಗೆದುಕೊಳ್ಳದೇ ಬೆಳಗಾವಿ ನಗರದ ಸರ್ವಾಂಗೀಣ ಅಭಿವೃದ್ಧಿಯ ಕಡೆಗೆ ಗಮನ ಹರಿಸುವುದಾಗಿ ತಿಳಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Manda Sunil Balekundri of ward 29 has been elected as new mayor od Belgaum City Corporation(BCC) on Thursday(Apr.7). Vandana Prabhu Bilagi was the lone opponent who took her nomination back. This may again lead tussle between Maharashtra Ekikaran Samithi and Kannadigas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more